ಮುಂಬಯಿ : ನಿರಂತರ ಐದು ದಿನಗಳಿಂದ ನಷ್ಟದ ಹಾದಿಯಲ್ಲಿ ಸಾಗುತ್ತಿದ್ದ ಮುಂಬಯಿ ಶೇರು ಪೇಟೆ ಇಂದು ಗುರುವಾರದ ವಹಿವಾಟನ್ನು ಲಾಭದ ಹಾದಿಗೆ ಒಯ್ದಿದೆ.
ಇಂದು ಗುರುವಾರದ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 85.82 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 29,422.39 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 32.90 ಅಂಕಗಳ ಏರಿಕೆಯನ್ನು ದಾಖಲಿಸಿ 9,136.40 ಅಂಕಗಳ ಮಟ್ಟವನ್ನು ತಲುಪುವಲ್ಲಿ ಸಫಲವಾಗಿದೆ.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,823 ಶೇರುಗಳು ಮುನ್ನಡೆ ಸಾಧಿಸಿದವು; 1,048 ಶೇರುಗಳು ಹಿನ್ನಡೆಗೆ ಗುರಿಯಾದವು. 170 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಗೇಲ್, ಅದಾನಿ ಪೋರ್ಟ್, ಗ್ರಾಸಿಂ ಇಂಡಸ್ಟ್ರೀಸ್ ಮತ್ತು ಬ್ಯಾಂಕ್ ಆಫ್ ಬರೋಡ ಇಂದಿನ ಟಾಪ್ ಗೇನರ್‌ಗಳು. ಐಸಿಐಸಿಐ, ಎಕ್ಸಿಸ್ ಬ್ಯಾಂಕ್ ಮತ್ತು ಎಸ್ ಬ್ಯಾಂಕ್ ಟಾಪ್ ಲೂಸರ್‌ಗಳು.
ಇಂದಿನ ವಹಿವಾಟಿನಲ್ಲಿ ಮಿಡ್ ಕ್ಯಾಪ್ ಶೇರುಗಳು ಶೇ.1ರಷ್ಟು ಏರುವ ಮೂಲಕ ಹೊಳೆದು ಕಂಡವು. ಆದರೆ ಬ್ಯಾಂಕ್ ನಿಫ್ಟಿ ಶೇ.0.30 ನಷ್ಟಕ್ಕೆ ಗುರಿಯಾಗಿ 21,491.40 ಅಂಕಗಳ ಮಟ್ಟಕ್ಕೆ ಇಳಿದವು.