Advertisement

2 ತಿಂಗಳ ಗರಿಷ್ಠ ಮಟ್ಟಕ್ಕೆ ಜಗಿದ ಮುಂಬಯಿ ಶೇರು; 240 ಅಂಕ ಏರಿಕೆ

04:34 PM Jan 11, 2017 | |

ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿನ ತೇಜಿ ಹಾಗೂ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೈಗೊಳ್ಳುವರೆಂಬ ಕೆಲವೊಂದು ನಿರ್ಣಾಯಕ ಆರ್ಥಿಕ ಉಪಕ್ರಮಗಳ ಹಿನ್ನೆಲೆಯಲ್ಲಿ ಭಾರೀ ಜಿಗಿತಕ್ಕೆ ಮುಂದಾದ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು ಎರಡು ತಿಂಗಳ ಗರಿಷ್ಠ ಮಟ್ಟವಾಗಿ 240.85 ಅಂಕಗಳ ಏರಿಕೆಯೊಂದಿಗೆ 27,140.41 ಅಂಕಗಳ ಮಟ್ಟಕ್ಕೇರುವ ಸಾಧನೆಯನ್ನು ತೋರಿದೆ. 

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 92.05 ಅಂಕಗಳ ಏರಿಕೆಯನ್ನು ದಾಖಲಿಸಿ 8,380.65 ಅಂಕಗಳ ಮಟ್ಟವನ್ನು ತಲುಪಿದೆ.

ಇಂದಿನ ವಹಿವಾಟಿನಲ್ಲಿ ಇಂಡಸ್‌ ಇಂಡ್‌ ಬ್ಯಾಂಕ್‌ ಶೇ.5.5, ಸೌತ್‌ ಇಂಡಿಯನ್‌ ಬ್ಯಾಂಕ್‌ ಶೇ.2ರಷ್ಟು ಏರಿದವು. ಉಳಿದಂತೆ ಎಚ್‌ ಡಿ ಎಫ್ ಸಿ ಬ್ಯಾಂಕ್‌, ಎಚ್‌ ಡಿ ಎಫ್ ಸಿ ಲಿಮಿಟೆಡ್‌, ಐಸಿಐಸಿಐ ಬ್ಯಾಂಕ್‌ ಮತ್ತು ಎಸ್‌ಬಿಐ ಶೇ.1ರಿಂದ ಶೇ.2ರಷ್ಟು ಏರಿದವು.  ನಿಫ್ಟಿ ಬ್ಯಾಂಕ್‌ ಸೂಚ್ಯಂಕ ಕಳೆದ ಒಂದು ತಿಂಗಳಲ್ಲೇ ಗರಿಷ್ಠ ಮಟ್ಟದ ಶೇ.1.58ರ ಏರಿಕೆಯನ್ನು ದಾಖಲಿಸಿತು.

ಉತ್ತಮ ಮುನ್ನಡೆ ಕಂಡ ಇತರ ಶೇರುಗಳೆಂದರೆ ಹಿಂಡಾಲ್ಕೊ ಶೇ.6.1, ಕೋಲ್‌ ಇಂಡಿಯಾ ಶೇ.5.3 ಮತ್ತು ಟಾಟಾ ಸ್ಟೀಲ್‌ ಶೇ.4. 

Advertisement

Udayavani is now on Telegram. Click here to join our channel and stay updated with the latest news.

Next