Advertisement

ಹೊಸ ವರ್ಷದ ಮೊದಲ ದಿನ ಮುಗ್ಗರಿಸಿದ ಮುಂಬಯಿ ಶೇರು

11:06 AM Jan 02, 2017 | udayavani editorial |

ಮುಂಬಯಿ : ಹೊಸ ವರ್ಷದ ಮೊದಲ ದಿನವಾದ ಇಂದು ಸೋಮವಾರದ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 132 ಅಂಕಗಳ ನಷ್ಟಕ್ಕೆ ಗುರಿಯಾದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, 11 ಗಂಟೆಯ ಹೊತ್ತಿಗೆ 160.89 ಅಂಕಗಳ ನಷ್ಟದೊಂದಿಗೆ 26,465.57 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44.45 ಅಂಕಗಳ ನಷ್ಟದೊಂದಿಗೆ 8,141.35 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದೆ. 

ಇಂದಿನ ಆರಂಭಿಕ ವಹಿವಾಟಿನಲ್ಲಿ ಯುನಿಟೆಕ್‌, ಡಿಎಲ್‌ಎಫ್, ಎಚ್‌ಡಿಐಎಲ್‌, ಒಬೆರಾಯ್‌ ರಿಯಲ್ಟಿ, ಶೋಭಾ, ಗೋದ್ರೆಜ್‌ ಪ್ರಾಪರ್ಟಿಸ್‌, ಇಂಡಿಯಾ ಬುಲ್ಸ್‌ ರಿಯಲ್‌ ಎಸ್ಟೇಟ್‌ ಶೇರುಗಳು ಉತ್ತಮ ಖರೀದಿಯನ್ನು ಕಂಡು ಶೇ.5ರ ಏರಿಕೆಯನ್ನು ಕಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next