Advertisement

245 ಅಂಕಗಳ ಭರ್ಜರಿ ಮುನ್ನಡೆ ಕಂಡ ಮುಂಬಯಿ ಶೇರು ಪೇಟೆ

04:29 PM Jan 05, 2017 | udayavani editorial |

ಮುಂಬಯಿ : ಏಶ್ಯನ್‌ ಹಾಗೂ ವಿಶ್ವ ಶೇರು ಮಾರುಕಟ್ಟೆಗಳಲ್ಲಿನ ಸ್ಥಿರತೆಯನ್ನು ಅನುಸರಿಸಿ ಮುನ್ನಡೆದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 245.11 ಅಂಕಗಳ ಉತ್ತಮ ಏರಿಕೆಯೊಂದಿಗೆ 26,878.24 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 83.30 ಅಂಕಗಳ ಮುನ್ನಡೆಯನ್ನು ಕಂಡು ದಿನದ ವಹಿವಾಟನ್ನು 8,273.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್‌ ಶೇರು ಶೇ.3ರಷ್ಟು ಏರಿತು. ಉಳಿದಂತೆ ಅದಾನಿ ಪೋರ್ಟ್‌, ಟಾಟಾ ಸ್ಟೀಲ್‌, ಓಎನ್‌ಜಿಸಿ ಮತ್ತು ಐಸಿಐಸಿಐ ಬ್ಯಾಂಕ್‌ ಟಾಪ್‌ ಗೇನರ್‌ ಎನಿಸಿಕೊಂಡವು. ವ್ಯತಿರಿಕ್ತವಾಗಿ ಟಿಸಿಎಸ್‌, ಇನ್‌ಫೋಸಿಸ್‌, ಮಹೀಂದ್ರ ಶೇರುಗಳು ಹಿನ್ನಡೆಗೆ ಗುರಿಯಾಗಿ ಟಾಪ್‌ ಲೂಸರ್‌ ಎನಿಸಿಕೊಂಡವು. 

ಇಂದಿನ ವಹಿವಾಟಿನಲ್ಲಿ 1,913 ಶೇರುಗಳು ಮುನ್ನಡೆ ಕಂಡರೆ 792 ಶೇರುಗಳು ಹಿನ್ನಡೆಗೆ ಗುರಿಯಾದವು; 145 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next