Advertisement

ಮುಂಬಯಿ ಶೇರು ಪೇಟೆಯಲ್ಲಿ ಮುಂದುವರಿದ ತೇಜಿ: 131 ಅಂಕ ಏರಿಕೆ

11:40 AM Jan 18, 2017 | |

ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವ ಧನಾತ್ಮಕ ಬೆಳವಣಿಗೆಗಳನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಉತ್ತಮ ಮುನ್ನಡೆಯನ್ನು ಸಾಧಿಸಿದೆ. 

Advertisement

ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್‌ 131.07 ಅಂಕಗಳ ಏರಿಕೆಯೊಂದಿಗೆ 27,366.73 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 46.40 ಅಂಕಗಳ ಮುನ್ನಡೆಯೊಂದಿಗೆ 8,44.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಆರಂಭಿಕ ವಹಿವಾಟಿನಲ್ಲಿ ಆಟೋಮೊಬೈಲ್‌, ಬ್ಯಾಂಕಗಳು, ಎಫ್ಎಂಸಿಜಿ ಮತ್ತು ಮೆಟಲ್‌ ಶೇರುಗಳು ಮುನ್ನಡೆಯನ್ನು ಸಾಧಿಸಿವೆ.  ಎಸ್‌ ಬ್ಯಾಂಕ್‌, ಅಂಬುಜಾ ಸಿಮೆå…, ಟಾಟಾ ಸ್ಟೀಲ್‌, ಕೋಟಕ್‌ ಮಹೀಂದ್ರ ಮತ್ತು ಅಲ್‌ಟ್ರಾ ಟೆಕ್‌ ಸಿಮೆಂಟ್‌ ಶೇರುಗಳು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಟಾಪ್‌ ಗೇನರ್‌ ಎನಿಸಿಕೊಂಡವು. 

ಆದರೆ ಭಾರ್ತಿ ಏರ್‌ಟೆಲ್‌, ಐಡಿಯಾ ಸೆಲ್ಯುಲರ್‌, ಡಾ.ರೆಡ್ಡಿ, ಕೋಲ್‌ ಇಂಡಿಯಾ ಮತ್ತು ಸನ್‌ ಫಾರ್ಮಾ ಟಾಪ್‌ ಲೂಸರ್‌ ಎನಿಸಿಕೊಂಡವು.

Advertisement

Udayavani is now on Telegram. Click here to join our channel and stay updated with the latest news.

Next