Advertisement

ಬೆಂಗಳೂರು : ಇತ್ತೀಚೆಗೆ ಜಯನಗರದ ನ್ಯಾಷನಲ್‌ ಕಾಲೇಜು ಸಮೀಪದಲ್ಲಿ ಟೆಂಪೋ ಟ್ರಾವೆಲರ್‌ನಲ್ಲಿ ಕುಳಿತು ನಿರ್ಮಾಪಕ ಸಹೋದರರು ಹಾಗೂ ಇಬ್ಬರು ರೌಡಿಶೀಟರ್‌ಗಳ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಜಯನಗರ ಠಾಣೆ ರೌಡಿಶೀಟರ್‌ ಬಾಂಬೆ ರವಿಗೂ ಮಂಗಳೂರಿಗೂ ಸಂಬಂಧ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

2011ರಲ್ಲಿ ಬಾಂಬೆ ರವಿ ಪ್ರಕರಣವೊಂದರಲ್ಲಿ ಬಳ್ಳಾರಿ ಜೈಲು ಸೇರಿದ್ದ. ಆಗ ಮಂಗಳೂರಿನ ಪ್ರಕರಣವೊಂದರಲ್ಲಿ ಕಿರಣ್‌ ಶೆಟ್ಟಿ ಹಾಗೂ ರಿಯಾಜ್‌ ಎಂಬವರು ಅದೇ ಜೈಲಿನಲ್ಲಿದ್ದು, ಪರಸ್ಪರ ಪರಿಚಯವಾಗಿದೆ. ಅನಂತರ ಮೂವರು ಒಟ್ಟಿಗೆ ಬಿಡುಗಡೆಯಾಗಿದ್ದರು. ಬಳಿಕ ಬಾಂಬೆ ರವಿಯು ಮಂಗಳೂರು ಭೂಗತ ಜಗತ್ತಿನ ಜತೆ ಗುರುತಿಸಿಕೊಂಡು ನೇರವಾಗಿ ಭೂಗತ ಪಾತಕಿ ಛೋಟಾ ಶಕೀಲ್‌ ತಂಡದಲ್ಲಿ ಕಾಣಿಸಿಕೊಂಡಿದ್ದ. ಅನಂತರ ನಿಧಾನವಾಗಿ ಬೆಂಗಳೂರಿನಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಆರಂಭಿಸಿದ್ದಾನೆ.

2012ರಲ್ಲಿ ಮಂಗಳೂರಿನಲ್ಲಿ ರೌಡಿ ಶೀಟರ್‌ ರಶೀದ್‌ ಮಲಾರಿ ಸೂಚನೆ ಮೇರೆಗೆ ಕೆಲವು ಪ್ರಮುಖರ ಹತ್ಯೆಗೆ ಸಂಚು ರೂಪಿಸಿ, ಮಂಗಳೂರಿನಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆಗ ವಿಚಾರಣೆಯಲ್ಲಿ ಆರೋಪಿಗಳು ಛೋಟಾ ಶಕೀಲ್‌ ತಂಡದಲ್ಲಿ ಸಕ್ರಿಯವಾಗಿರುವುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next