Advertisement

ಐಐಟಿ ಮಾಡಿದ ಯುವಕ ರೈಲ್ವೇಯಲ್ಲಿ ‘ಡಿ’ಗ್ರೂಪ್ ಹುದ್ದೆಗೆ ಸೇರಿದ ; ಕಾರಣ..?

10:14 AM Aug 27, 2019 | Hari Prasad |

ಪಾಟ್ನಾ: ಇದನ್ನು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ಪರಿಣಾಮವೆನ್ನಬೇಕೋ ಅಥವಾ ತಮಗೆ ಸರಕಾರಿ ಕೆಲಸವೇ ಬೇಕೆಂದು ಜನರ ಬಯಕೆಗೊಂದು ಉದಾಹರಣೆ ಎನ್ನಬೇಕೋ ತಿಳಿಯದು. ಆದರೆ ಈ ಸುದ್ದಿಯನ್ನು ಮಾತ್ರ ನಂಬಲೇಬೇಕು.

Advertisement

ಬಾಂಬೇ ಐಐಟಿಯಿಂದ ಬಿ.ಟೆಕ್ ಮತ್ತು ಎಂ.ಟೆಕ್. ಪದವಿಯನ್ನು ಪಡೆದುಕೊಂಡ ಯುವಕನೊಬ್ಬ ರೈಲ್ವೇ ಇಲಾಖೆಯ ‘ಡಿ’ ಗ್ರೇಡ್ ಪರೀಕ್ಷೆ ಬರೆದು ಹಳಿ ಕಾವಲುಗಾರ (ಟ್ರ್ಯಾಕ್ ಮನ್) ಹುದ್ದೆಗೆ ಸೇರಿರುವುದು ಇದೀಗ ಎಲ್ಲ ಕಡೆ ಸುದ್ದಿಯಾಗುತ್ತಿದೆ.

ಬಿಹಾರದ ರಾಜಧಾನಿ ಪಟ್ನಾ ನಿವಾಸಿಯಾಗಿರುವ ಶ್ರವಣ್ ಕುಮಾರ್ ಎಂಬ ಯುವಕನೇ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವ ಯುವಕನಾಗಿದ್ದಾನೆ.

ಬಿಹಾರದ ರಾಜಧಾನಿ ಪಟ್ನಾ ನಿವಾಸಿಯಾಗಿರುವ ಶ್ರವಣ್ ಕುಮಾರ್ ಎಂಬ ಯುವಕನೇ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವ ಯುವಕನಾಗಿದ್ದಾನೆ. ರೈಲ್ವೇ ಇಲಾಖೆಯ ‘ಡಿ’ ಗ್ರೂಪ್ ಪರೀಕ್ಷೆಯಲ್ಲಿ ಪಾಸಾಗಿರುವ ಶ್ರವಣ್ ಕುಮಾರ್ ಅವರನ್ನು ಇದೀಗ ಜಾರ್ಖಂಡ್ ರಾಜ್ಯದ ಚಂದ್ರಾಪುರದಲ್ಲಿ ಪಬ್ಲಿಕ್ ವರ್ಕ್ಸ್ ಇನ್ ಸ್ಪೆಕ್ಟರ್ ವಿಭಾಗದಡಿಯಲ್ಲಿ ಚಂದ್ರಾಪುರ ಮತ್ತು ಟೆಲೋ ನಡುವೆ ಹಳಿ ನಿರ್ವಹಣಾ ಕಾಮಗಾರಿ ತಂಡದಲ್ಲಿ ನೇಮಿಸಲಾಗಿದೆ.

ಶ್ರವಣ್ ಕುಮಾರ್ ಕೆಲಸಕ್ಕೆ ಸೇರಿಕೊಂಡಾಗ ಧನ್ ಬಾದ್ ರೈಲ್ವೇ ನಿಲ್ದಾಣದ ಬಹುತೇಕ ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದರಂತೆ. ಯಾಕೆಂದರೆ ಐಐಟಿ ಪದವೀಧರನೊಬ್ಬ ಈ ವಿಧದ ಕೆಲಸಕ್ಕೆ ಬರಬಹುದೆಂದು ಅವರು ಎಣಿಸಿರಲೇ ಇಲ್ಲವಂತೆ. ಆದರೆ ಸರಕಾರಿ ಉದ್ಯೋಗದಲ್ಲಿ ಜೀವನಕ್ಕೆ ಭದ್ರತೆ ಸಿಗುವುದರಿಂದ ತಾನು ಈ ಕೆಲಸವನ್ನು ಆರಿಸಿಕೊಂಡೆ ಎಂದು ಶ್ರವಣ ಕುಮಾರ್ ಅವರು ಯಾವುದೇ ಹಿಂಜರಿಕೆ ಇಲ್ಲದೆ ಹೆಳಿಕೊಂಡಿದ್ದಾರೆ.

Advertisement

ಕುಮಾರ್ ಅವರು 2010ರಲ್ಲಿ ಸಮಗ್ರ ಪದವೀ ಕೋರ್ಸ್ ಅನ್ನು ಆಯ್ದುಕೊಂಡು ಐಐಟಿಗೆ ಸೇರಿಕೊಂಡರು ಮತ್ತು 2015ರಲ್ಲಿ ಅವರ ಪದವಿಯನ್ನು ಪೂರೈಸಿದರು. ಆವಾಗಲಿಂದಲೇ ಕುಮಾರ್ ಅವರು ಸರಕಾರಿ ಕೆಲಸವನ್ನೇ ಬಯಸುತ್ತಿದ್ದರಂತೆ.

ಇದೀಗ ಭವಿಷ್ಯದಲ್ಲಿ ಸರಕಾರಿ ಉದ್ಯೋಗದಲ್ಲೇ ಅಧಿಕಾರಿ ಹುದ್ದೆಗೆ ಭಡ್ತಿ ಹೊಂದುವ ಭರವಸೆ ಶ್ರವಣ ಕುಮಾರ್ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next