Advertisement

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌-ಯುವ ವಿಭಾಗ‌: ಯುವಿಕಾ -2018

05:27 PM Dec 25, 2018 | Team Udayavani |

ಮುಂಬಯಿ: ಯುವಜನರು ಸಮಾಜದ ಸಂಸ್ಕೃತಿ, ಸಂಸ್ಕಾರವನ್ನು ಅರಿತು ಸಮಾಜದ ಅಭಿವೃದ್ಧಿಗೆ ಮುಂದೆ ಬರಬೇಕು. ಆಧುನಿಕ ಕಾಲದಲ್ಲಿ ಯುವಜನರು ಸಮಾಜಪರ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಸಾಧ್ಯವಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಬಗ್ಗೆಯೂ ನಾವು ಹೆಚ್ಚಿನ ಗಮನ ವಹಿಸಿ ಅವರನ್ನು ಮುಂದೆಗೆ ತರಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಭವಾನಿ ಗ್ರೂಪ್‌ ಆಫ್‌ ಕಂಪೇನಿಸ್‌ ಸಿಎಂಡಿ ಕುಸುಮೋದರ್‌ ಡಿ. ಶೆಟ್ಟಿ ನುಡಿದರು.

Advertisement

ಅವರು ಡಿ. 22ರಂದು ನವಿಮುಂಬಯಿಯ  ಜುಯಿನಗರದ ಬಂಟ್ಸ್‌ ಸೆಂಟರ್‌ನ ಸೌಮ್ಯಲತಾ ಸದಾನಂದ   ಶೆಟ್ಟಿ ಸಭಾಗೃಹದಲ್ಲಿ  ಜರಗಿದ ಬೋಂಬೆ ಬಂಟ್ಸ್‌ ಅಸೋ. ಇದರ ಯುವ ವಿಭಾಗದ ಯುವಿಕಾ -2018 ನೃತ್ಯ ಮತ್ತು ಸಂಗೀತ ದ ಸಾಂಸ್ಕೃತಿಕ ಹಬ್ಬದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ಇಂತಹ ಕಾರ್ಯಕ್ರಮಗಳಿಂದ ಸಮಾಜದ ಜನರನ್ನು ಒಂದುಗೂಡಿಸಿ ಸಂಘಟನೆಯನ್ನು ಸಕ್ರಿಯಗೊಳಿಸಬಹುದು ಎಂದರು.

ಇನ್ನೋರ್ವ ಅತಿಥಿ ಥಾಣೆ ಬಂಟ್ಸ್‌ ಅಸೋ. ಅಧ್ಯಕ್ಷ ಕುಶಲ್‌ ಭಂಡಾರಿ ಮಾತನಾಡಿ, ಯುವಿಕಾ ದಂತಹ ಕಾರ್ಯಕ್ರಮದಿಂದ ಸಮಾಜದ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ದೊರಕುತ್ತದೆ. ನಮ್ಮ ಸಮಾಜದಲ್ಲಿ ಅನೇಕ ಪ್ರತಿಭೆಗಳಿದ್ದು ಅವರನ್ನು ಬೆಳಕಿಗೆ ತರುವಲ್ಲಿ ಸಂಘ ಸಂಸ್ಥೆಗಳು ಮತ್ತು ಯುವಜನರು ಮುಂದೆಬರಬೇಕು. ಇಂದಿನ ಯುವ ವಿಭಾಗದ ಈ ಕಾರ್ಯಕ್ರಮವು ಅತ್ಯುತ್ತಮವಾಗಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ   ಅಧ್ಯಕ್ಷತೆ ವಹಿಸಿ ಮಾತನಾಡಿ ದ ಬೋಂಬೆ ಬಂಟ್ಸ್‌ ಅಧ್ಯಕ್ಷ ಅಡ್ವೊಕೇಟ್‌ ಸುಭಾಷ್‌ ಬಿ. ಶೆಟ್ಟಿ ಅವರು, ಬೋಂಬೆ ಬಂಟ್ಸ್‌ ಅಸೋ.ಸಮಾಜದ ಯುವಜನರು ಮುಂದೆಬಂದು ಸಮಾಜಪರ ಕಾರ್ಯದಲ್ಲಿ ಸಕ್ರಿಯರಾಗಿರಬೇಕು ಎಂಬ ಉದ್ದೇಶದಿಂದ ಈ ಯುವ ವಿಭಾಗವನ್ನು ಸ್ಥಾಪಿಸಿದೆ. ಇಂದು ಯುವ ವಿಭಾಗವು ಅತ್ಯು ತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಪರ ಕಾರ್ಯಗಳಲ್ಲಿ ತಮ್ಮನ್ನು ತೊಡ ಗಿಸಿಕೊಂಡಿರುವುದು ಒಂದು ಉತ್ತಮ ಬೆಳವಣಿಗೆ ಯಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಅಸೋ. ಬೆಂಬಲ ಸದಾ ಇರುತ್ತದೆ ಎಂದು ನುಡಿದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ವಿಭಾಗದ ಕಾರ್ಯಾಧ್ಯಕ್ಷ ಚರಣ್‌ ಆರ್‌. ಶೆಟ್ಟಿ, ಯುವಜನರು ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಸಮಾಜಕ್ಕೆ ತೋರಿಸಬೇಕು ಹಾಗೂ ನಮ್ಮ ಸಂಘಟನೆಯಲ್ಲಿ ಸಕ್ರಿಯರಾಗಿರಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದಕ್ಕೆ ಬೋಂಬೆ ಬಂಟ್ಸ್‌ ಅಸೋ. ಅಧ್ಯಕ್ಷರು, ಎಲ್ಲ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಇಂದಿನ ಅತಿಥಿಗಳು, ಗಣ್ಯರು ಹಾಗೂ ಪ್ರಾಯೋಜಕತ್ವವನ್ನು ವಹಿಸಿಕೊಂಡ ಮಹನೀಯರಿಂದಾಗಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುವಂತಾಗಿದೆ. ಇವರೆಲ್ಲ ರಿಗೂ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇ ನೆ ಎಂದರು. ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭ ಗೊಂಡಿತು. ಯುವಿಕಾ 2018 ಸಾಂಸ್ಕೃತಿಕ ಹಬ್ಬದ ಅಂಗವಾಗಿ ಯುವಕ ಯುವತಿಯರಿಂದ ಸಂಗೀತ ಓಪನ್‌ ಸ್ಟೇಜ್‌ ನೃತ್ಯ, ಫ್ಯಾಶನ್‌ ಶೋ, ಪೋಸ್ಟರ್‌ ಮೇಕಿಂಗ್‌ ಸ್ಫರ್ಧಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಮಧ್ಯೆ  ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕ್ರೀಡಾಪಟು ಬಾಲಕೃಷ್ಣ ಶೆಟ್ಟಿ, ದೇಹದಾಡ್ಯì ಪಟು ರೋಹಿತ್‌ ಶೆಟ್ಟಿ,  ಡಾ| ನಾಗರಾಜ್‌ ಶೆಟ್ಟಿ ಹಾಗೂ ಡಾ| ಚಿಂತನ್‌ ಹೆಗ್ಡೆ ಮತ್ತಿತರ ಸಾಧಕರನ್ನು ವೈಯಕ್ತಿಕ ಸಾಧನೆಗಾಗಿ ಯುವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಅಸೋ. ಉಪಾಧ್ಯಕ್ಷ ಮುರಳಿ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್‌ ಶೆಟ್ಟಿ, ಜತೆ   ಕಾರ್ಯದರ್ಶಿ ಅಡ್ವೊಕೇಟ್‌ ಗುಣಕರ್‌ ಡಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಶ್ಯಾಮ ಸುಂದರ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಲತಾ ಜಿ. ಶೆಟ್ಟಿ, ಯುವ ವಿಭಾಗದ ಉಪಕಾರ್ಯಾಧ್ಯಕ್ಷ ಶಶಿಕಾಂತ್‌ ರೈ, ಯುವ ವಿಭಾಗದ ಕಾರ್ಯದರ್ಶಿ ಸ್ಮೃತಿ  ಎ. ಶೆಟ್ಟಿ, ಯುವ ವಿಭಾಗದ ಕೋಶಾಧಿಕಾರಿ ಧನಂಜಯ್‌ ಎಸ್‌. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ  ರಾಜೀವ್‌ ಜೆ. ಶೆಟ್ಟಿ, ನಿಶಾಂತ್‌ ಕೆ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.  ಯಶಸ್ವಿನಿ ಡಿ. ಶೆಟ್ಟಿ, ಅಕ್ಷಯ್‌ ಶೆಟ್ಟಿ ಹಾಗೂ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
  
ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next