Advertisement
ಮುಂಬಯಿ ಯಲ್ಲದೆ ಊರಿನಲ್ಲೂ ಅವರ ಸಮಾಜ ಸೇವೆ ಅನನ್ಯವಾಗಿದೆ. ಕಷ್ಟ ಎಂದು ಬಂದವರನ್ನು ಅವರು ಬರೀ ಕೈಯಲ್ಲಿ ಕಳಿಸಿದವರಲ್ಲ. ದೇಣಿಗೆ ನೀಡುವಲ್ಲೂ ಅವರು ಒಂದು ಹೆಜ್ಜೆ ಮುಂದೆ. ಅವರು ದೈಹಿಕವಾಗಿ ನಮ್ಮಿಂದ ದೂರಹೋದರೂ ಕೂಡ ಅವರು ಮಾಡಿದ ಸಾಧನೆ, ಆದರ್ಶಗಳು ನಮಗೆ ದಾರಿದೀಪವಾಗಿದೆ. ಅವರು ಜೀವಿತ ಕಾಲ ದಲ್ಲಿ ಮಾಡಿದ ಸೇವೆ ಅಜರಾಮರವಾಗಿರಲಿ ಎಂದು ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಶೆಟ್ಟಿ ಅವರು ನುಡಿದರು.
ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಎನ್. ಸಿ. ಶೆಟ್ಟಿ ಇವರು ಮಾತನಾಡಿ, ಬಾಬು ಶೆಟ್ಟಿ ಅವರ ಸಮಾಜ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಅವರಲ್ಲಿ ಬಂಟತನವಿತ್ತು. ಧಾರ್ಮಿಕ ಕಾರ್ಯಗಳಿಗೆ ಅಪಾರ ಸೇವೆಯನ್ನು ನೀಡಿದ್ದಾರೆ. ಕಟೀಲು ಧ್ವಜಸ್ತಂಭಕ್ಕೆ ಬೆಳ್ಳಿಮುಚ್ಚಿಸಿದ ಮಹಾದಾನಿ ಅವರಾಗಿದ್ದಾರೆ. 91 ರ ಹರೆಯದಲ್ಲೂ ಅವರು ಲವಲವಿಕೆಯಿಂದ ಕೂಡಿದ್ದರು ಎಂದರು. ಮತ್ತೋರ್ವ ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ ಇವರು ಮಾತನಾಡಿ, 1961 ರಲ್ಲಿ ಕಟೀಲಿನ ತೀರ್ಥ ಮಂಟಪಕ್ಕೆ ಬೆಳ್ಳಿಯ ಕವಚವನ್ನು ನೀಡಿದ ಮುಂಬಯಿಯ ಪ್ರಥಮ ದಾನಿ ಅವರಾಗಿದ್ದಾರೆ. ಅವರ ಮದುವೆಯ ಪ್ರತೀ ವಾರ್ಷಿಕೋತ್ಸವದಂದು ಕಟೀಲಿನ ಯಕ್ಷಗಾನವನ್ನು ಆಡಿಸಿದ್ದಾರೆ. ನಿತ್ಯಾನಂದ ಗುರುಗಳ ಪರಮ ಭಕ್ತರಾಗಿದ್ದು, ದೇವಿ ಆರಾಧಕರಾಗಿದ್ದುಕೊಂಡ ಅವರು ಶುಕ್ರವಾರವೇ ದೈವಾಧೀನರಾಗಿ ದೇವಿಯ ಪಾದಕ್ಕೆ ಅರ್ಪಿತಗೊಂಡಿದ್ದಾರೆ ಎಂದು ನುಡಿದರು.
Related Articles
ಮಾಜಿ ಅಧ್ಯಕ್ಷ ಜಯರಾಮ ಎಸ್. ಮಲ್ಲಿ ಇವರು ಮಾತನಾಡಿ, 1968-69 ನೇ ಸಾಲಿನಲ್ಲಿ ಬಾಬು ಶೆಟ್ಟಿ ಅವರ ಪರಿಚಯವಾಯಿತು. ತುಂಬಾ ಸರಳ
ವ್ಯಕ್ತಿತ್ವ ಅವರದು. ನಗು ಮೊಗದ ಅವರು ಅಸೋಸಿಯೇಶನ್‌ನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ನುಡಿದರು.
Advertisement
ಗೋಪಾಲ್ ವೈ. ಶೆಟ್ಟಿ, ಪತ್ರಕರ್ತ ದಯಾಸಾಗರ್ ಚೌಟ, ಶ್ರೀ ಗುರುದೇವಾ ಸೇವಾ ಬಳಗ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಎಲ್. ಶೆಟ್ಟಿ, ನಟರಾಜ್ ರಾವ್ ಪಡುಬಿದ್ರೆ, ಬಾಬು ಎನ್. ಶೆಟ್ಟಿ ಅವರ ಆತ್ಮೀಯರಾದ ಆ್ಯಂಟನಿ ಮೊದಲಾದವರು ನುಡಿನಮನ ಸಲ್ಲಿಸಿದರು. ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟÅ ಘಟಕದ ಗೌರವ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ, ಬಾಬು ಶೆಟ್ಟಿ ಅತ್ತೂರು ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಅಸೋಸಿಯೇಶನ್‌ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್. ಶೆಟ್ಟಿ, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಟ್ರಸ್ಟಿಗಳು, ಬಾಬು ಶೆಟ್ಟಿ ಅವರ ಅಭಿಮಾನಿಗಳು, ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಟವೃಷ್ಟಿಗೈದು ಶ್ರದ್ಧಾಂಜಲಿ ಸಲ್ಲಿಸಿದರು.