Advertisement

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ವಾರ್ಷಿಕ ಮಹಾಸಭೆ, ಬಹಿರಂಗ ಅಧಿವೇಶನ

05:57 PM Oct 23, 2018 | Team Udayavani |

ನವಿಮುಂಬಯಿ: 36 ವರ್ಷಗಳ ಹಿಂದೆ ಸಮಾಜ ಚಿಂತಕರು, ಶ್ರಮಜೀವಿಗಳು ಸಮಾಜವನ್ನು ಸಂಘಟಿಸಿ ಅವರ ಕಷ್ಟ-ಸುಖಗಳಿಗೆ ನೆರವಾಗಬೇಕು ಎಂಬ ಉದ್ಧೇಶದಿಂದ ಸ್ಥಾಪಿಸಿದ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಸಂಸ್ಥೆಯು ಇಂದು ಬೆಳೆದು ಮುಂಬಯಿಯ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಕಂಗೊಳಿಸುತ್ತಿದೆ. ಸಂಸ್ಥೆಯನ್ನು  ಜನಪರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಎಲ್ಲರು ಪ್ರೇರೇಪಿಸಬೇಕು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರ ಕಣ್ಣೀರೊರೆಸುವಲ್ಲಿ ಸಂಸ್ಥೆಯ ಮುಖಾಂತರ ಎಲ್ಲರು ಮುಂದೆ ಬರಬೇಕು ಎಂದು ಬೋಂಬೆ ಬಂಟ್ಸ್‌ ಅಸೋ. ಅಧ್ಯಕ್ಷ ನ್ಯಾಯವಾದಿ ಸುಭಾಶ್‌ ಬಿ. ಶೆಟ್ಟಿ ನುಡಿದರು.

Advertisement

ಅ.21 ರಂದು ಪೂರ್ವಾಹ್ನ ಜೂಯಿನಗರದ ಬಂಟ್ಸ್‌ ಸೆಂಟರ್‌ನ ಸಭಾಗೃಹದಲ್ಲಿ ಜರಗಿದ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನ ವಾರ್ಷಿಕ ಮಹಾಸಭೆ ಮತ್ತು ಬಹಿರಂಗ ಅಧಿವೇಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಯು ಇಂದು ಉತ್ತಮ ಪ್ರಗತಿಯನ್ನು ಕಂಡುಕೊಂಡಿದ್ದು, ಪ್ರತೀ ವರ್ಷವೂ ಶೈಕ್ಷಣಿಕವಾಗಿ ನೆರವನ್ನು ನೀಡುವುದರೊಂದಿಗೆ ಆರ್ಥಿಕವಾಗಿ ಹಿಂದುಳಿದ ಬಡಕುಟುಂಬಗಳಿಗೆ ವೈದ್ಯಕೀಯ ಹಾಗೂ ಇತರ ಸೇವೆಗಳನ್ನು ಮಾಡುತ್ತಿದ್ದೇವೆ. ಸಮಾಜ ಬಾಂಧವರಿಗೆ ಸಹಾಯ ಮಾಡುವುದೇ ನಮ್ಮ ಉದ್ಧೇಶವಾಗಿದೆ. ನಾನು ಸದಾ ಈ ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸುತ್ತೇನೆ. ನಮ್ಮ ಸಮಾಜರ ಕಾರ್ಯಗಳಿಗೆ ಅನೇಕ ದಾನಿಗಳು ಸಹಾಯ ಮಾಡುತ್ತಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇನೆ. ನಮ್ಮ ಉಪಸಮಿತಿಗಳು ಉತ್ತಮ ಕಾರ್ಯಗಳನ್ನು ಮಾಡುವುದರೊಂದಿಗೆ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಒಂದು ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎನ್ನಲು ಸಂತೋಷವಾಗುತ್ತಿದೆ ಎಂದು ನುಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಮಾಜದ ಗಣ್ಯರುಗಳಾದ ಭವಾನಿ ಗ್ರೂಪ್‌ ಆಫ್‌ ಕಂಪೆನೀಸ್‌ ಇದರ ಮುಖ್ಯ ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ, ಪ್ರಸಿದ್ಧ ಕ್ಯಾನ್ಸರ್‌ ತಜ್ಞ ಡಾ| ಶಿಶಿರ್‌ ಎನ್‌. ಶೆಟ್ಟಿ, ಪ್ರಸಿದ್ಧ ಹೊಟೇಲ್‌ ಉದ್ಯಮಿ ಸುಂದರ್‌ ಹೆಗ್ಡೆ, ಖ್ಯಾತ ಚಿತ್ರಕಲಾವಿದ ದೇವದಾಸ್‌ ಶೆಟ್ಟಿ, ಶಿವಛತ್ರಪತಿ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಬಾಲಕೃಷ್ಣ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನಪತ್ರವನ್ನಿತ್ತು ಸಮ್ಮಾನಿಸಲಾಯಿತು.

ಸಮ್ಮಾನಿತರಾದ ಕಲಾವಿದ ದೇವದಾಸ್‌ ಶೆಟ್ಟಿ, ಸುಂದರ ಹೆಗ್ಡೆ, ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ಈ ಸಮ್ಮಾನನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದೇವೆ ಎಂದು ನುಡಿದು, ತಮ್ಮ ಸೇವೆಯನ್ನು ಗುರುತಿಸಿ ಸಮ್ಮಾನಿಸಿದ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ಗೆ ಕೃತಜ್ಞತೆ ಸಲ್ಲಿಸಿದರು. 

ಇದೇ ಸಂದರ್ಭದಲ್ಲಿ 2017- 2018 ನೇ ಶೈಕ್ಷಣಿಕ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಿ ಗೌರವಿಸಲಾಯಿತು. ಬಹಿರಂಗ ಅಧಿವೇಶನದ ಮೊದಲು ಜರಗಿದ ವಾರ್ಷಿಕ ಮಹಾಸಭೆಯು ಜರಗಿತು.
ಸದಸ್ಯರುಗಳಾದ ಕೆ. ಕೆ. ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ, ಟಿ. ಆರ್‌. ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ರತ್ನಾಕರ ಶೆಟ್ಟಿ, ಮಾಜಿ ಅಧ್ಯಕ್ಷ ಎನ್‌. ಸಿ. ಶೆಟ್ಟಿ, ಸಿಎ ಕರುಣಾಕರ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸರಳಾ ಶೆಟ್ಟಿ ಮೊದಲಾದವರು ಸೂಕ್ತ ಸಲಹೆ -ಸೂಚನೆಗಳನ್ನು ನೀಡಿದರು. ಪತ್ರಕರ್ತ ದಯಾಸಾಗರ್‌ ಚೌಟ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ  ಸಿಎ ವಿಶ್ವನಾಥ್‌ ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ಗುಣಕರ್‌ ಡಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಶ್ಯಾಮ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಚರಣ್‌ ಆರ್‌. ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ  ವಿಭಾಗದ    ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ- ಸದಸ್ಯೆಯರು, ಯುವ ವಿಭಾಗದ ಸದಸ್ಯ-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

Advertisement

ಬಂಟರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಯಶಸ್ವಿಯಾಗಿದ್ದಾರೆ. ನಾವು ಒಗ್ಗಟ್ಟಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡಬೇಕು. ಆಗ ಸಂಘಟನೆ ಬಲಗೊಳ್ಳಲು ಸಾಧ್ಯವಾಗುತ್ತದೆ. ಆರ್ಥಿಕ ಸಮಸ್ಯೆಯಿಂದ ಶಿಕ್ಷಣವನ್ನು ಮೊಟುಗೊಳಿಸುವ ಸಮಾಜದ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯ ನಮ್ಮಿಂದಾಗಬೇಕು. ಇಂದು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತÂವನ್ನು ನೀಡುವ ಅಗತ್ಯತೆಯಿದೆ. ಸಮಾಜಪರ ಕಾರ್ಯಗಳಿಗೆ ನನ್ನಿಂದಾಗುವ ಪ್ರೋತ್ಸಾಹ, ಸಹಕಾರ ಸದಾಯಿದೆ .
ಕೆ. ಡಿ. ಶೆಟ್ಟಿ , ಮುಖ್ಯ ಆಡಳಿತ ನಿರ್ದೇಶಕರು : ಭವಾನಿ ಗ್ರೂಪ್‌ ಆಫ್‌ ಕಂಪೆನೀಸ್‌

ಬಂಟರು ಕಠಿನ ಪರಿಶ್ರಮಿಗಳು. ಆದ್ದರಿಂದ ಅವರು ಪ್ರತಿಯೊಂದು ಕ್ಷೇತ್ರಗಳಲ್ಲೂ ಯಶಸ್ವಿಯಾಗುತ್ತಾರೆ. ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಸಂಘ-ಸಂಸ್ಥೆಗಳ ಮೂಲಕ ಮಾಡಬೇಕು. ಸಮಾಜ ಸೇವೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲೂ ನಾವು ಮುಂದಾಗಬೇಕು. ವೈದ್ಯಕೀಯ ದೃಷ್ಟಿಯಿಂದ ಸಂಸ್ಥೆಗೆ ಎಲ್ಲಾ ರೀತಿಯ ನೆರವು ನೀಡಲು ನಾನು ಸಿದ್ಧನಿದ್ದೇನೆ ೆ .
ಡಾ| ಶಿಶಿರ್‌ ಶೆಟ್ಟಿ ,  ಕ್ಯಾನ್ಸರ್‌ ತಜ್ಞ

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next