Advertisement
ಪ್ರೇಮ ಕತೆಯುಳ್ಳ ಡೋಲಾ ಮಾರುರಾಜಸ್ಥಾನದ ಸುಪ್ರಸಿದ್ಧ “ಡೋಲಾ ಮಾರು’ ಎಂಬ ಜಾನಪದ ಪ್ರೇಮಕಥೆಯನ್ನು ಆಕಾರ್ ಪಪೆಟ್ ಥಿಯೇಟರ್, “ಬೆಂಗಳೂರು ಪಪೆಟ್’ ಉತ್ಸವದಲ್ಲಿ ಪ್ರದರ್ಶಿಸುತ್ತಿದೆ. ತೇಜೋಮಯ ಸು#ರದ್ರೂಪಿ ಯುವರಾಜ ಡೋಲಾ, ಒಬ್ಬ ಮಾಂತ್ರಿಕೆಯ ಕುತಂತ್ರದಿಂದ, ತನ್ನ ಬಾಲ್ಯದ ಪ್ರಿಯೆ ಮಾರುನಿಂದ ದೂರ ಆಗಿ, ಅವಳನ್ನು ಮರೆತು ಮಾಂತ್ರಿಕೆಯ ಜೊತೆ ಸಂಸಾರ ಮಾಡುತ್ತಿರಲು, ಇತ್ತ ತನ್ನ ಬಾಲ್ಯದ ಗೆಳೆಯ ಹಾಗೂ ಪ್ರಿಯತಮ ಡೋಲನಿಗಾಗಿ ಮಾರು ಕಾಯುತ್ತಿರುತ್ತಾಳೆ. ಅವಳ ಊರಿಗೆ ಬರುವ ಒಬ್ಬ ಬೊಂಬೆಯಾಟದವ ಇವಳ ಕಥೆಯನ್ನು ಕೇಳಿ, ಅದೇ ಕತೆಯನ್ನು ತನ್ನ ಆಟದಲ್ಲಿ ಅಳವಡಿಸಿಕೊಂಡು ಡೋಲಾನ ಆಸ್ಥಾನಕ್ಕೆ ಬಂದು ಪ್ರದರ್ಶಿಸುತ್ತಾನೆ. ಆಟದಲ್ಲಿ ಬರುವ ಯುವರಾಜ ತಾನೇ ಎಂದು ಆಗ ಅರಿಯುವ ಡೋಲಾ ಬೊಂಬೆಯಾಟದವನ ಸಹಾಯದಿಂದ ಮತ್ತೆ ತನ್ನ ಪ್ರಿಯತಮೆ ಮಾರುವನ್ನು ಸೇರಲು ಹೊರಡುತ್ತಾನೆ. ಅವನನ್ನು ತಡೆಯಲು ಮಾಂತ್ರಿಕ ತಂತ್ರಗಳನ್ನು ಹೂಡುತ್ತಾನೆ. ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ಆಟವಿದು.
ಬೊಂಬೆಯಾಟ ಉತ್ಸವವನ್ನು ಅನಾವರಣ ಸಂಸ್ಥೆ ಆಯೋಜಿಸುತ್ತಿದೆ. ಅನಾವರಣ ಒಂದು ಸಾಂಸ್ಕೃತಿಕ ಸಂಘಟನೆಯಾಗಿದ್ದು ವರ್ತಮಾನದ ಸಾಂಸ್ಕೃತಿಕ ಸವಾಲುಗಳನ್ನು ನಿಭಾಯಿಸುವ ಉದ್ದೇಶವನ್ನು ಹೊಂದಿದೆ. ಕನ್ನಡದ ಪಾರಂಪರಿಕ ರಂಗ ಕಲೆಗಳ ಕೌಶಲ್ಯಗಳ ಸಂಗೋಪನೆ ಮತ್ತು ಪ್ರದರ್ಶನಗಳ ಮೂಲಕ ಅರಿವನ್ನು ವಿಸ್ತರಿಸುವ ಆಶಯವನ್ನೂ ಸಂಸ್ಥೆ ಹೊಂದಿದೆ. ಅಳಿವಿನ ಅಂಚಿನಲ್ಲಿರುವ ಬೊಂಬೆಯಾಟಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಚರ್ಚೆಯೂ ನಡೆದಿದೆ. ಶತ್ರುಸೈನ್ಯದ ರಾಜನನ್ನು ಚೆಂಡಾಡಿದ ವೀರ ವನಿತೆ ನೇಪಾಳ ದೇಶದ ರಾಜ ಪೌಂಡ್ರಿಕ ಹಾಗೂ ರಾಣಿ ಸತ್ಯವತಿ ದೇವಿ, ಪಾರ್ವತಿಯ ಅನುಗ್ರಹದಿಂದ ಹೆಣ್ಣುಮಗುವನ್ನು ಪಡೆಯುತ್ತಾರೆ.
Related Articles
Advertisement
ಮಾಂತ್ರಿಕ ಕ್ಷಣಗಳ ಕಂಬ ರಾಮಾಯಣ ಕೃಷ್ಣನ್ ಕುಟ್ಟಿ ಪುಲವರ್ ಸ್ಮಾರಕ ತೊಲಪಾವಕೂತ್ತು ಮತ್ತು ಪಪೆಟ್ ಕೇಂದ್ರ, ಕೇರಳದ ಸಾಂಪ್ರದಾಯಿಕ ಗೊಂಬೆಯಾಟ “ತೊಲಪಾವಕೂತ್ತು’ ಕಂಬ ರಾಮಾಯಣದ ಆಯ್ದ ಭಾಗಗಳನ್ನು ಪ್ರಸ್ತುತ ಪಡಿಸುತ್ತಿದೆ.
ರಾಮಾಯಣದ ವನವಾಸ, ಪಂಚವಟಿ ಪ್ರಸಂಗ, ಸೀತಾಪಹರಣ, ಜಟಾಯು ವಧೆ, ವಾಲಿ ವಧೆ, ರಾಮ-ರಾವಣ ಕಾಳಗ ಹಾಗೂ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗಗಳನ್ನು ಈ ಪ್ರದರ್ಶನ ಒಳಗೊಂಡಿದೆ. ಒಂದು ಗಂಟೆ ಅವಧಿಯಲ್ಲಿ ರಾಮಾಯಣವನ್ನು ಮಾಂತ್ರಿಕ ಸನ್ನಿವೇಶಗಳೊಂದಿಗೆ, ತಂಡ ಪ್ರಸ್ತುತ ಪಡಿಸಲಿದೆ. ಕೇರಳದ ಗುಡಿಗಳಿಗೆ ಸೀಮಿತವಾಗಿದ್ದ ಸಾಂಪ್ರದಾಯಿಕ ಕಲೆ “ತೊಲಪಾವಕೂತ್ತು ತೊಗಲು ಗೊಂಬೆಯಾಟ’. ಈ ಗೊಂಬೆಯಾಟದ ಕಲಾಪ್ರಕಾರವನ್ನು ದೇವಸ್ಥಾನದ ಆವರಣದಿಂದ ಹೊರತಂದು ಜಗತ್ತಿಗೆ ಪರಿಚಯಿಸಿದ ಕಲಾವಿದ ಕೆ.ಎಲ್.ಕೃಷ್ಣನ್ ಕುಟ್ಟಿಯವರಿಗೆ ಸಲ್ಲುತ್ತದೆ. ಇಂದು ಅವರ ಹೆಸರಿನಲ್ಲಿ ಸ್ಥಾಪನೆಯಾದ ಸಂಸ್ಥೆ, ಈ ಕಲಾಪ್ರಕಾರವನ್ನು ಜಗತ್ತಿನಾದ್ಯಂತ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ.
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆಯಾವಾಗ?:
ಸುಪ್ರಭಾ ವಿಲಾಸ- ನವೆಂಬರ್ 21
ಡೋಲಾ ಮಾರೋ- ನವೆಂಬರ್ 22
ಕಂಬ ರಾಮಾಯಣ- ನವೆಂಬರ್ 23
ಸಂಜೆ 7 | ಸಂಪರ್ಕ: 9448130960