Advertisement
ಈ ಮಧ್ಯೆ, ಹುಸಿ ಬಾಂಬ್ ಬೆದರಿಕೆಯೊಡ್ಡುತ್ತಿದ್ದ ಸಾಮಾಜಿಕ ಜಾಲತಾಣಗಳ ಏಳೆಂಟು ಖಾತೆಗಳನ್ನು ಸೈಬರ್ ಭದ್ರತಾ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ. ಮತ್ತೊಂದೆಡೆ, ಬುಧವಾರ ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಹೊರಟ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮುಂಬಯಿ ಯಲ್ಲಿ ಗುರುವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿತು. ಈ ವಿಮಾನದಲ್ಲಿ 147 ಪ್ರಯಾಣಿಕರಿದ್ದರು. ಮುಂಬಯಿ ಗೆ ಬರುತ್ತಿದ್ದ ಮತ್ತೂಂದು ವಿಮಾನಕ್ಕೂ ಬಾಂಬ್ ಬೆದರಿಕೆ ಒಡ್ಡಲಾಗಿತ್ತು.
ಹುಸಿ ಬಾಂಬ್ ಬೆದರಿಕೆಯ ಮೂಲ ವನ್ನು ಕೇಂದ್ರೀಯ ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ. ಜರ್ಮನಿ, ಲಂಡನ್ ಐಪಿ ಅಡ್ರೆಸ್‌ಗಳ ಮೂಲಕ ಬೆದರಿಕೆಯ ಪೋಸ್ಟ್‌ಗಳನ್ನು ಮಾಡಿದ್ದು ಗೊತ್ತಾಗಿದೆ. ಈ ವಾರ ಸುಮಾರು 20 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಬಾಂಬ್ ಬೆದರಿಕೆಯನ್ನು ಸ್ವೀಕರಿಸಿವೆ. ಮುಂಬಯಿ: 6 ಗಂಟೆ ವಿಮಾನ ಹಾರಾಟ ಸ್ಥಗಿತ
ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ರನ್‌ವೇ ನಿರ್ವಹಣೆ ಕಾಮಗಾರಿ ಕೈಗೈತ್ತಿಕೊಂಡಿದ್ದು, ಗುರುವಾರ ಆರು ಗಂಟೆಗಳ ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.
Related Articles
Advertisement