Advertisement

ಪೊಲೀಸರಿಗೆ ಚಳ್ಳೆಹಣ್ಣು; ಬಾಂಬ್ ನಾಗನಿಂದ 500 ಸಿಮ್ ಬಳಕೆ!

03:34 PM Apr 20, 2017 | Sharanya Alva |

ಬೆಂಗಳೂರು: ಕೋಟ್ಯಂತರ ರೂಪಾಯಿ ಅಪನಗದೀಕರಣಗೊಂಡ ಹಣ ಮನೆಯಲ್ಲಿ ಇಟ್ಟುಕೊಂಡು ಸಿಕ್ಕಿಬಿದ್ದಿದ್ದ ರೌಡಿಶೀಟರ್ ಬಾಂಬ್ ನಾಗ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ, ಮತ್ತೊಂದೆಡೆ ಈವರೆಗೆ 500 ಸಿಮ್ ಬದಲಿಸಿರುವ ಬಾಂಬ್ ನಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನುಸುತ್ತಿದ್ದಾನೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಬಾಂಬ್ ನಾಗನಿಗಾರಿ ಪೊಲೀಸರ ಹುಡುಕಾಟ ತೀವ್ರಗೊಂಡಿದೆ. ಪೊಲೀಸ್ ತನಿಖೆ ವೇಳೆ ಬಾಂಬ್ ನಾಗ ಈವರೆಗೆ 500 ನಂಬರ್ ಬಳಸಿ ತನ್ನ ಆಪ್ತರ ಹಾಗೂ ಸಂಬಂಧಿಕರ ಜೊತೆ ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ. ನಿನ್ನೆ ಕೇರಳದಿಂದ ಬಾಂಬ್ ನಾಗ ಕರೆ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹೆಣ್ಣೂರು ಪೊಲೀಸರು ಕೋರ್ಟ್ ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಏತನ್ಮಧ್ಯೆ ಬಾಂಬ್ ನಾಗ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next