Advertisement

ಬಾಂಬ್‌ ಸ್ಫೋಟ:ಯೋಧ ಹುತಾತ್ಮ

08:23 AM Feb 14, 2018 | Harsha Rao |

ಹರಿಹರ: ರಾಜಸ್ಥಾನದ ಪೋಖಾನ್‌ ಸಮೀಪ ಸೇನಾ ತರಬೇತಿ ಶಿಬಿರದಲ್ಲಿ ಅಭ್ಯಾಸ ನಿರತರಾಗಿದ್ದ ವೇಳೆ ಸಂಭವಿಸಿದ ಆಕಸ್ಮಿಕ ಬಾಂಬ್‌ ಸ್ಫೋಟದಲ್ಲಿ ಹರಿಹರದ ಯೋಧ ಅಬ್ದುಲ್‌ ಜಾವಿದ್‌ (32) ಮೃತಪಟ್ಟಿದ್ದಾರೆ. ನಗರದ ದಾವಣಗೆರೆ ರಸ್ತೆ ಲಾಲ್‌ಬೇಗ್‌ಸಾಬ್‌ ಬಿಲ್ಡಿಂಗ್‌ ಸಮೀಪದ ಗುಜರಿ ವ್ಯಾಪಾರಿ ಅಬ್ದುಲ್‌ ಖಾದರ್‌, ಫಾತಿಮಾ ಬಿ ದಂಪತಿಯ ಐವರು ಮಕ್ಕಳಲ್ಲಿ 2ನೇಯವರಾದ ಅಬ್ದುಲ್‌ ಜಾವಿದ್‌ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Advertisement

ಬೆಂಗಳೂರು ಮದ್ರಾಸ್‌ ಇಂಜಿನಿಯರಿಂಗ್‌ ಗ್ರೂಪ್‌ನ 14ನೇ ಇಂಜಿನಿಯರ್‌ ರೆಜಿಮೆಂಟ್‌ನಲ್ಲಿ ನಾಯಕ್‌ ಆಗಿದ್ದ ಜಾವಿದ್‌ ಇತ್ತೀಚೆಗಷ್ಟೇ ವಿಶೇಷ ತರಬೇತಿ ಗೆಂದು ರಾಜಸ್ಥಾನದ ಪೋಖಾನ್‌ಗೆ ತೆರಳಿದ್ದರು. ಸೇನೆಯ ಅಧಿಕಾರಿಗಳು ಸೋಮವಾರ ರಾತ್ರಿ ಕುಟುಂಬದವರಿಗೆ ಕರೆ ಮಾಡಿ ಬಾಂಬ್‌ ಸ್ಫೋಟದಲ್ಲಿ ಜಾವಿದ್‌ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಇವರ ಪಾರ್ಥಿವ ಶರೀರ
ಜೋಧಪುರದ ಮಿಲಿಟರಿ ಆಸ್ಪತ್ರೆಯಿಂದ ವಿಮಾನದ ಮೂಲಕ ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಬರಲಿದ್ದು, ರಾತ್ರಿ ವೇಳೆಗೆ ಹರಿ 
ಹರಕ್ಕೆ ತಲುಪುವ ನಿರೀಕ್ಷೆಯಿದೆ. ಗುರುವಾರ ಅಂತಿಮ ಸಂಸ್ಕಾರ ನಡೆಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next