Advertisement

ಪಾಕ್‌ನಲ್ಲಿ ಬಾಂಬ್‌ ಸ್ಫೋಟ: ಉತ್ತರಾಖಂಡದಲ್ಲಿ ಪ್ರತಿಭಟನೆ!

10:20 AM Feb 23, 2020 | Team Udayavani |

ನವದೆಹಲಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಶುಕ್ರವಾರ ವಿಚಿತ್ರ ವಿಚಾರಣೆಯೊಂದು ನಡೆಯಿತು. ಉತ್ತರಾ ಖಂಡದಲ್ಲಿನ ವಕೀಲರು ನೇಪಾಳದಲ್ಲಿ ಭೂಕಂಪವಾದರೆ, ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟವಾದರೆ ಮುಷ್ಕರ ನಡೆಸುತ್ತಾರೆ. ಇದು ಕಾನೂನುಬಾಹಿರ ಎಂದು ಉತ್ತರಾಖಂಡ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಡೆಹ್ರಾಡೂನ್‌ ವಕೀಲರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ವಕೀಲರ ವರ್ತನೆಯನ್ನು ಸುಪ್ರೀಂ ಕೂಡ ಗಂಭೀರವಾಗಿ ಪರಿಗಣಿಸಿತು.

Advertisement

ಉತ್ತರಾಖಂಡದ ವಕೀಲರು ಪ್ರತಿ ಶನಿವಾರ ಮುಷ್ಕರ ನಡೆಸುತ್ತಾರೆ. ಇದರಿಂದ 2012-2016ರ ಅವಧಿಯಲ್ಲಿ ಡೆಹ್ರಾಡೂನಿನಲ್ಲಿ 465, ಹರಿದ್ವಾರದಲ್ಲಿ 515 ದಿನ ಮುಷ್ಕರ ದಲ್ಲೇ ಕಳೆದುಹೋಗಿದೆ. ಈ ಮಾಹಿತಿಯನ್ನು ಕಾನೂನು ಆಯೋಗ ನೀಡಿದೆ. ಇದರಿಂದ ನ್ಯಾಯಾಲಯದ ಕಲಾಪದ ಮೇಲೆ ಹೊಡೆತ ಬಿದ್ದಿದೆ ಎಂದು ಹೈಕೋರ್ಟ್‌ ಹೇಳಿತ್ತು.

ನ್ಯಾಯಪೀಠ ಗರಂ: ಪ್ರತಿ ಶನಿವಾರ ಮುಷ್ಕರ ನಡೆಸುವ ಪರಿಪಾಠ ಉತ್ತರಾಖಂಡ ವಕೀಲರಿಗಿದೆ. ವಕೀಲರು ಸಂಬಂಧಿಕರು ಸತ್ತರೆ, ಬೇರೆ ರಾಜ್ಯದ ವಕೀಲರ ಸಂಘಕ್ಕೆ ಬೆಂಬಲ ಬೇಕಾದರೆ, ಶ್ರೀಲಂಕಾದಲ್ಲಿ ಸಂವಿಧಾನ ಬದಲಾದರೆ ಹೀಗೆ ಗೊತ್ತುಗುರಿಯಿಲ್ಲದೇ ಮುಷ್ಕರ ನಡೆಸುತ್ತಾರೆ. ಇದಕ್ಕೆಲ್ಲ ಬಾರ್‌ ಅಸೋಸಿಯೇಷನ್‌ ಹೇಗೆ ಅವಕಾಶ ನೀಡುತ್ತದೆ? ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಸರ್ವೋಚ್ಚ ನ್ಯಾಯಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next