Advertisement
ಸೋಮವಾರ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಾಯಿತಾದರೂ, 2008ರಲ್ಲಿ ಗುಜರಾತ್‌ನ ಅಹಮದಾಬಾದ್ ಹಾಗೂ ಸೂರತ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲೂ ಆರೋಪಿಯಾಗಿರುವ ಆಫ್ರಿದಿ, ವಿಚಾರಣೆಗಾಗಿ ಅಹಮದಾಬಾದ್‌ಗೆ ತೆರಳಿದ್ದ. ಹೀಗಾಗಿ ನ್ಯಾಯಾಲಯ ಮಂಗಳವಾರಕ್ಕೆ ವಿಚಾರಣೆ ಮುಂದೂಡಿತು ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದರು.
Related Articles
Advertisement
ಇಲ್ಲಿಯೇ ಮದುವೆಯೂ ಆಗಿ ಬಿಟಿಎಂ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಆನ್‌ಲೈನ್‌ಲ್ಲಿ ಇಸ್ರೇಲ್ ವಿರೋಧಿ ವಿಡಿಯೋಗಳನ್ನು ನೋಡಿ ಪ್ರಭಾವಿತನಾಗಿದ್ದ ಈತ, ಇಸ್ರೇಲಿಗರನ್ನು ನಿರ್ಮೂಲನೆ ಮಾಡಬೇಕೆಂಬ ಮನಸ್ಥಿತಿ ಹೊಂದಿದ್ದ. ಫೇಸ್‌ಬುಕ್‌ನಲ್ಲೂ ಸಕ್ರಿಯವಾಗಿದ್ದ ಆಫ್ರಿದಿ,
2014ರ ಜುಲೈ ತಿಂಗಳಲ್ಲಿ ಅಬ್ದುಲ್ ಖಾನ್ ಹೆಸರಿನ ವ್ಯಕ್ತಿಯೊಂದಿಗೆ ನಿರಂತರ ಚಾಟ್ ಮಾಡಿದ್ದಾನೆ. ಆತನ ಸೂಚನೆ ಮೇರೆಗೆ ಚರ್ಚ್‌ಸ್ಟ್ರೀಟ್‌ನ ಕೋಕನಟ್ ಗ್ರೋವರ್ ಹೋಟೆಲ್‌ಗೆ ಡಿ.28ರಂದು ಇಸ್ರೇಲ್ ಪ್ರತಿನಿಧಿಗಳು ಬರುವ ಮಾಹಿತಿ ಆಧರಿಸಿ ಬಾಂಬ್ ಇಟ್ಟಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ.
ತಾನೇ ಬಾಂಬ್ ತಯಾರಿಸಿದ್ದ!: ಇಸ್ರೇಲ್ ಪ್ರತಿನಿಧಿಗಳ ಹತ್ಯೆಗೆ ಸ್ಕೆಚ್ ಹಾಕಿದ ಫೇಸ್‌ಬುಕ್ ಸಹಚರ ಅಬ್ದುಲ್ ಖಾನ್ ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಸುವ ಲಿಂಕ್ ಒಂದನ್ನು ಆಫ್ರಿದಿಗೆ ಕಳುಹಿಸಿದ್ದ. ಅದರಂತೆ ಬಾಂಬ್ ತಯಾರಿ ಆರಂಭಿಸಿದ ಆಫ್ರಿದಿ, ಬೊಮ್ಮನಹಳ್ಳಿಯ ಗುಜರಿ ಅಂಗಡಿಯೊಂದರಲ್ಲಿ ಎಲ್ ಆಕಾರದ 2.5 ಇಂಚಿನ ಕಬ್ಬಿಣದ ಪೈಪ್,
ಮಡಿವಾಳದ ಹಾರ್ಡ್‌ವೇರ್ ಅಂಗಡಿಯಲ್ಲಿ ಕಬ್ಬಿಣದ ಪೈಪ್‌ಗೆ ಕನೆಕ್ಟ್ ಮಾಡುವ ಸಣ್ಣಸಾಧನಗಳು, ಬ್ಯಾಟರಿ, ಖರೀದಿಸಿದ್ದ. ಜತೆಗೆ ಚಿಕ್ಕ ಟೇಬಲ್ ಕ್ಲಾಕ್, 250 ಗ್ರಾಂ ಸಕ್ಕರೆ, ಚೀನಾದ ಡೆಕೋರೆಟಿಂಗ್ ಲೈಟ್ಸ್ ಹಾಗೂ ನೂರಕ್ಕೂ ಹೆಚ್ಚು ಬೆಂಕಿ ಪೊಟ್ಟಣಗಳನ್ನು ಸಂಗ್ರಹಿಸಿದ್ದ. ಬಳಿಕ ಕಬ್ಬಿಣದ ರಾಡ್‌ಗೆ ಸ್ಫೋಟಯುಕ್ತ ರಾಸಾಯನಿಕ ಪುಡಿ ತುಂಬಿ, ಡೆಕೋರೇಟಿವ್ ಲೈಟ್‌ಗಳು, ಬ್ಯಾಟರಿ ಹಾಗೂ ಟೈಮರ್ ಅಳವಡಿಸಿದ್ದ. ಈ ಪ್ರಕ್ರಿಯೆಗೆ 12 ದಿನ ತೆಗೆದುಕೊಂಡಿದ್ದ.
ಬಾಂಬ್ ತಯಾರಾದ ಬಳಿಕ ಚರ್ಚ್‌ಸ್ಟ್ರೀಟ್‌ನ ಕೋಕನೆಟ್ ಗ್ರೋವ್ ಹೋಟೆಲ್ ಬಳಿ ಡಿಸೆಂಬರ್ 23ರಂದು ಬಾಂಬ್ ಇಡಲು ಸ್ಥಳ ಗೊತ್ತು ಮಾಡಿದ್ದ ಆರೋಪಿ, ಡಿ.28ರಂದು ಆಂಧ್ರಜ್ಯೋತಿ ದಿನಪತ್ರಿಕೆಯಲ್ಲಿ ಬಾಂಬ್ ಇರಿಸಿಕೊಂಡು ಬೈಕ್‌ನಲ್ಲಿ ಶಾಂತಿನಗರಕ್ಕೆ ಬಂದಿದ್ದು, ಮಿಶನ್ ರಸ್ತೆಯಲ್ಲಿ ಬೈಕ್ ನಿಲ್ಲಿಸಿ, ಕೋಕನೇಟ್ ಗ್ರೋವರ್ ಹೋಟೆಲ್‌ಗೆ ನಡೆದು ಹೋಗಿದ್ದ. ಮೊದಲೇ ಗುರುತಿಸಿದ್ದ ಸ್ಥಳದಲ್ಲಿ ರಾತ್ರಿ 7.15ಕ್ಕೆ ಬಾಂಬ್ ಇರಿಸಿ ಅಲ್ಲಿಂದ ನಿರ್ಗಮಿಸಿದ್ದ. ಮರುದಿನ ಬೈಕ್ ಮಾರಿ ತಲೆಮರೆಸಿಕೊಂಡಿದ್ದ.
ಆತ್ಮಹತ್ಯೆ ಬೆದರಿಕೆ!: ಆರೋಪಿ ಆಫ್ರಿದಿ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿರುವ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತರಲಿದ್ದಾರೆ. ಆರೋಪಿಯನ್ನು ಬಂಧಿಸಿದ ಕೂಡಲೇ ಸಣ್ಣ ಸಣ್ಣ ಕಲ್ಲುಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಸಿದ್ದ ಜೊತೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೂ ಅಪರಾಧಿ ಪ್ರಜ್ಞೆಯಿಂದ ಹಲವು ಬಾರಿ ಆತ್ಮಹತ್ಯೆ ಯತ್ನ ನಡೆಸಿದ್ದಾನೆ.
ಹೀಗಾಗಿ ಆತನಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು, ಆದರೆ ಆರೋಪಿ ಮೆಡಿಸನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿ ವೈದ್ಯರು ಕೊಟ್ಟ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ, ಆತನ ಕೊಠಡಿಯ ದಿಂಬಿನ ಕೆಳಗೆ ಗಂಭೀರ ಸ್ವರೂಪದ 20 ನಿದ್ರಾಜನಕ ಮಾತ್ರೆಗಳನ್ನಿಟ್ಟುಕೊಂಡಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
35 ಉಗ್ರ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿ!: ಅಹಮದಾಬಾದ್‌ನ ಜುಹಾಪುರದ ನ್ಯೂ ಐಶ್ವರ್ಯ ಕಾಲೊನಿಯ ನಿವಾಸಿ ಅಲಂ ಜೆಬ್ ಆಫ್ರಿದಿ, 35ಕ್ಕೂ ಹೆಚ್ಚು ಉಗ್ರಗಾಮಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ. ಸಿಮಿ ಉಗ್ರ ಸಂಘಟನೆಯ ಸಕ್ರಿಯ ಸದಸ್ಯ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಆಫ್ರಿದಿ, 2008ರಲ್ಲಿ ಅಹಮದಾಬಾದ್ ಹಾಗೂ ಸೂರತ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲೂ ಆರೋಪಿಯಾಗಿದ್ದಾನೆ.
ದುರಂತದಲ್ಲಿ ಮಹಿಳೆ ಬಲಿಯಾಗಿದ್ದರು: 2014ರ ಡಿಸೆಂಬರ್ 28ರಂದು ರಾತ್ರಿ 8-30ರ ಸುಮಾರಿಗೆ ಚರ್ಚ್ ಸ್ಟೀಟ್‌ನ ಕೋಕನೇಟ್ ಗ್ರೋವರ್ ಬಾರ್ ಆಂಡ್ ರೆಸ್ಟೋರೆಂಟ್ ಮುಂಭಾಗ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಓರ್ವ ಮಹಿಳೆ ಸಾವು ಹಾಗೂ ಮೂವರು ಗಾಯಗೊಂಡಿದ್ದರು.
ಘಟನೆ ಬಳಿಕ ಸದ್ದಿಲ್ಲದೇ ನಗರದಿಂದ ಪರಾರಿಯಾಗಿದ್ದ ಆರೋಪಿ ಅಫ್ರಿದಿ ಹಲವು ತಿಂಗಳುಗಳ ಕಾಲ ಇತ್ತ ತಲೆ ಹಾಕಿರಲಿಲ್ಲ. ಬಳಿಕ ಘಟನೆಯ ಬಿಸಿ ತಣ್ಣಗಾಗಿದೆ ಎಂದುಕೊಂಡು ಬಂದಿದ್ದ ಆರೋಪಿ 2016ರಲ್ಲಿ ಎಂ.ಜಿ ರಸ್ತೆಯಲ್ಲಿರುವ ವೀಸಾ ಕಚೇರಿ ಬಳಿ ಮತ್ತೂಂದು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ, ಈ ಬೆನ್ನಲ್ಲೇ ಜನವರಿ 22ರಂದು ಆರೋಪಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.