ಪಣಜಿ: ಬೊಮನ್ ಇರಾನಿಯವರ ಸಾಕ್ಷ್ಯಚಿತ್ರ “1947 ಬ್ರೆಕ್ಸಿಟ್ ಇಂಡಿಯಾ” ಗೋವಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಟನ್ರ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ 2023 ರಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.
ಭಾರತ ಮತ್ತು ಅಮೆರಿಕದ ಜಂಟಿ ನಿರ್ಮಾಣವಾಗಿರುವ ಈ ಸಾಕ್ಷ್ಯಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಇದರ ನಿರೂಪಕರಾಗಿ ನಟ ಬೊಮನ್ ಇರಾನಿ ಪಾತ್ರ ನಿರ್ವಹಿಸಿದ್ದಾರೆ.
ಈ ಚಿತ್ರವು ಭಾರತದಿಂದ ಬ್ರಿಟನ್‍ನ ನಿರ್ಗಮನದ ಸುತ್ತಲಿನ ಘಟನೆಗಳ ಆಕರ್ಷಕ ಪರಿಶೋಧನೆಯನ್ನು ಒದಗಿಸುತ್ತದೆ. 1947: ಬ್ರೆಕ್ಸಿಟ್ ಇಂಡಿಯಾ ಒಂದು ಪ್ರಮುಖ ಘಟನೆಯಾಗಿದೆ. ಇದು 20ನೇ ಶತಮಾನದ ಅತ್ಯಂತ ಮಹತ್ವದ ಭೌಗೋಳಿಕ ರಾಜಕೀಯ ಬದಲಾವಣೆಗೆ ಕಾರಣವಾಯಿತು.
ಈ ಸಾಕ್ಷ್ಯಚಿತ್ರವು ಬ್ರಿಟನ್‍ನ ಆತುರದ ಮತ್ತು ಹಠಾತ್ ವಾಪಸಾತಿಯು ಭಾರತದ ಸ್ವಾತಂತ್ರ್ಯವನ್ನು ಸುಮಾರು ಒಂದು ವರ್ಷಕ್ಕೆ ಹೇಗೆ ತ್ವರಿತಗೊಳಿಸಿತು ಎಂಬ ರಹಸ್ಯವನ್ನು ಬಿಚ್ಚಿಡುತ್ತದೆ. ಈ ಪ್ರಮುಖ ಐತಿಹಾಸಿಕ ಕ್ಷಣದ ಸಂಕೀರ್ಣತೆಗಳು ಮತ್ತು ನಂತರದ ಭೀಕರ ಪರಿಣಾಮಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಚಲನಚಿತ್ರ ಹೊಂದಿದೆ. ಲಂಡನ್, ವೇಲ್ಸ್, ಹಲ್, ದೆಹಲಿ, ಚಂಡೀಗಢ, ಅಮೃತಸರ, ಮುರ್ಷಿದಾಬಾದ್, ಪ್ಲಾಸಿ, ಬಕ್ಸರ್ ಮತ್ತು ಮುಂಬೈನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಇದು ಮಾನವ ದುರಂತದ ಪರಿಶೋಧನೆ, ನಮ್ಮ ಇತಿಹಾಸದಲ್ಲಿ ಒಂದು ಪ್ರಮುಖ ಕ್ಷಣವಾಗಿದೆ. ಅನೇಕರಿಗೆ ತಿಳಿದಿಲ್ಲದ ಭಾರತದ ಸ್ವಾತಂತ್ರ್ಯದ ಪ್ರಯಾಣದ ಬಗ್ಗೆ ಈ ಚಲನಚಿತ್ರವು ಟೈಮ್‍ಲೆಸ್ ದೃಷ್ಟಿಕೋನವನ್ನು ನೀಡುತ್ತದೆ. ಇದರ ನಿರ್ದೇಶಕರು ಸಂಜೀವನ್ ಲಾಲ್. ಡಾ.ಶಶಿ ತರೂರ್, ವಿಲಿಯಂ ಡಾಲ್ರಿಂಪಲ್, ಡಾ. ಇಶ್ತಿಯಾಕ್ ಅಹಮದ್, ಕಮೋಡೋರ್ ಉದಯ್ ಭಾಸ್ಕರ್, ಪ್ರೈ. ಎಂ. ರಾಜೀವ್ಲೋಚನ್, ಡಾ. ಅಲೆಸ್ಟರ್ ಹಿಂಡ್ಸ್, ಪ್ರೊ. ಟಾಮ್ ಟಾಮ್ಲಿನ್ಸನ್, ಡಾ. ಡೇವಿಡ್ ಒಮಿಸಿ ಮತ್ತು ಡಾ. ಗುರ್ಹರ್ಪಾಲ್ ಸಿಂಗ್ ಸೇರಿದಂತೆ ಹಲವು ಗಣ್ಯರು ಪ್ರಮುಖ ಪಾತ್ರದಲ್ಲಿದ್ದಾರೆ.