Advertisement

ಪೈವಳಿಕೆ ಬೋಳಂಗಳ್ಳೋತ್ಸವ; ವೈಭವೋಪೇತ ಚಾಲನೆ

01:55 AM Dec 14, 2018 | Karthik A |

ಕುಂಬಳೆ: ಪೈವಳಿಕೆ ಬೋಳಂಗಳದಲ್ಲಿ ಡಿ. 13-16ರಂದು ನಡಯಲಿರುವ ಬೋಳಂಗಳ್ಳೋತ್ಸವವು ಆರಂಭಗೊಂಡಿತು. ಕಾರ್ಯಕ್ರಮದಂಗವಾಗಿ ಡಿ. 13ರಂದು ಬೆಳಗ್ಗೆ ಪೈವಳಿಕೆಯಿಂದ ಬೋಳಂಗಳಕ್ಕೆ ಚೆಂಡೆ ವಾದ್ಯಮೇಳದಲ್ಲಿ ತುಳುನಾಡಿನ ವೈಭವದ ಮೆರವಣಿಗೆ ನಡೆಯಿತು. ಬಳಿಕ ಜರಗಿದ ಸಮಾರಂಭದಲ್ಲಿ ಜಾನಪದ ಕ್ರೀಡೆ ಮತ್ತು ಗ್ರಾಮೀಣ ಮೇಳದ ಉದ್ಘಾಟನೆಯನ್ನು ಕೇರಳ ತುಳು ಅಕಾಡಮಿ ಅಧ್ಯಕ್ಷ ಉಮೇಶ್‌ಸಾಲ್ಯಾನ್‌ ನೆರವೇರಿಸಿದರು. ಕಂಬಳ ಸಮಿತಿ ಗೌರವಾಧ್ಯಕ್ಷ ಡಿ.ಭಾಸ್ಕರ ರೈ ಮಂಜಲ್ತೋಡಿ ಅಧ್ಯಕ್ಷತೆ ವಹಿಸಿದರು.

Advertisement


ಗಣ್ಯರಾದ ಸೀತಾರಾಮ ಬಲ್ಲಳ್‌ ಚಿಪ್ಪಾರು, ಗೋಲ್ಡನ್‌ ಕೆ.ಎಚ್‌.ಖಾದರ್‌,ಪ್ರಸಾದ್‌ ರೈ ಕಯ್ನಾರ್‌,ಅಂದುಞಿ ಹಾಜಿ ಚಿಪ್ಪಾರ್‌, ಸದಾನಂದ ಕೊಮ್ಮಂಡ,  ಹನೀಫ್‌ ಹಾಜಿ ಪೈವಳಿಕೆ,  ಶೀನ ಮಾಸ್ಟರ್‌ ಕೋರಿಕ್ಕಾರ್‌, ಜನಾರ್ದನ ಶೆಟ್ಟಿ ಕಳಾಯಿ, ಲಾರೆನ್ಸ್‌ ಡಿ’ಸೋಜ, ಜಗದೀಶ ಶೆಟ್ಟಿ ಉರ್ಮಿ,ಶಾಫಿ ಪೈವಳಿಕೆ, ಸದಾನಂದ ಕೋರಿಕ್ಕಾರ್‌ ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಅಜಿತ್‌ ಎಂ.ಸಿ.ಲಾಲ್‌ಬಾಗ್‌ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್‌ ಶೆಟ್ಟಿ ಕಡಂಬಾರ್‌ ವಂದಿಸಿದರು. ಪ್ರಧಾನ ಸಂಚಾಲಕ ಅಶ್ವಥ್‌ ಪೂಜಾರಿ ಲಾಲ್‌ಬಾಗ್‌ ನಿರೂಪಿಸಿದರು.
ಅಣ್ಣತಮ್ಮ ಜೋಡುಕರೆ ಕಂಬಳವು ಡಿ.15 ರಂದು ಜರಗಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮ
ಸಮಾರಂಭದ ಬಳಿಕ  ಗ್ರಾಮೀಣ ಜಾನಪದ ಕ್ರೀಡೆಗಳು, ಕೇರಳ ಕರ್ನಾಟಕದ ಖ್ಯಾತ ಗಾಯಕರಿಂದ ಮ್ಯೂಸಿಕಲ್‌ ನೈಟ್‌ ಮತ್ತು ಮಂಗಳೂರು ತಂಡದಿಂದ ನೃತ್ಯವೈಭವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next