Advertisement

The Vaccine War: ‘ದಿ ವ್ಯಾಕ್ಸಿನ್ ವಾರ್’ ಟೀಸರ್‌ ಔಟ್; ʼಸಲಾರ್‌ʼ ಜೊತೆನೇ ರಿಲೀಸ್

03:11 PM Aug 15, 2023 | Team Udayavani |

ಮುಂಬಯಿ: ವಿವೇಕ್ ಅಗ್ನಿಹೋತ್ರಿ ಅವರ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಅಧಿಕೃತ ರಿಲೀಸ್ ಡೇಟ್ ಹಾಗೂ ಟೀಸರ್ ಮಂಗಳವಾರ (ಆ.15 ರಂದು) ರಿಲೀಸ್ ಆಗಿದೆ.

Advertisement

‘ದಿ ಕಾಶ್ಮೀರ್ ಫೈಲ್ಸ್’ ಬಳಿಕ ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಈ ಸಿನಿಮಾ ಕೋವಿಡ್ ವ್ಯಾಕ್ಸಿನ್ ಸುತ್ತ ಸಾಗುವ ಕಥೆಯನ್ನು ಒಳಗೊಂಡಿದೆ.

ಅದರಂತೆ 77ನೇ ಸ್ವಾತಂತ್ರ್ಯ ದಿನದಂದು ಸಿನಿಮಾದ ಟೀಸರ್ ರಿಲೀಸ್ ಆಗಿದೆ.  ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕುರಿತ ಪ್ರಯೋಗದ ದೃಶ್ಯದೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಭಾರತೀಯ ವಿಜ್ಞಾನಿಗಳು ವ್ಯಾಕ್ಸಿನ್‌ ಗಾಗಿ ಪಟ್ಟ ಶ್ರಮದ ಒಂದು ನೋಟವನ್ನು ತೋರಿಸಲಾಗಿದೆ.

ಸೈನ್ಸ್‌ ಲ್ಯಾಬ್‌ ನಲ್ಲಿ ವಿಜ್ಞಾನಿಯಾಗಿ ನಟಿ ಪಲ್ಲವಿ ಜೋಶಿ ಹಾಗೂ  ನಾನಾ ಪಾಟೇಕರ್ ಅವರ ಪಾತ್ರವನ್ನು ತೋರಿಸಲಾಗಿದೆ. ಕೋವಿಡ್ ವ್ಯಾಕ್ಸಿನ್‌ ಗಾಗಿ ಭಾರತೀಯ ವಿಜ್ಞಾನಿಗಳು ಮಾಡಿದ ಪ್ರಯೋಗದ ಸುತ್ತ ಚಿತ್ರದ ಕಥೆ ಸಾಗುತ್ತದೆ ಎನ್ನುವ ಅಂಶವನ್ನು ಟೀಸರ್‌ ಹೇಳಲಾಗಿದೆ.

ಟೀಸರ್‌ ನೊಂದಿಗೆ ಸಿನಿಮಾ‌ ತಂಡ ರಿಲೀಸ್‌ ಡೇಟ್‌ ಅನೌನ್ಸ್ ಮಾಡಿದ್ದು, ಇದೇ ವರ್ಷದ ಸೆ.28 ರಂದು ತೆರೆಗೆ ಬರಲಿದೆ ಎಂದು ಸಿನಿಮಾ ತಂಡ ಹೇಳಿದೆ.

Advertisement

ಅಚ್ಚರಿಯೆಂದರೆ ಅದೇ ದಿನ ಪ್ರಭಾಸ್‌ ಅಭಿನಯದ ಬಹು ನಿರೀಕ್ಷಿತ ʼಸಲಾರ್‌ʼ ಸಿನಿಮಾ ಕೂಡ ರಿಲೀಸ್‌ ಆಗಲಿದ್ದು, ಬಾಕ್ಸ್‌ ಆಫೀಸ್‌ ನಲ್ಲಿ ಮತ್ತೊಂದು ಪೈಪೋಟಿ ಉಂಟಾಗುವ ಸಾಧ್ಯತೆಯಿದೆ.

ಈ ಸಿನಿಮಾದಲ್ಲಿ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ʼಐ ಆ್ಯಮ್ ಬುದ್ಧʼ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next