Advertisement

ಬಾಲಿವುಡ್‌ನ‌ ತಾರೆಗಳಾದ ರಣಬೀರ್‌ ಕಪೂರ್‌-ಆಲಿಯಾ ಭಟ್‌ ಮದ್ವೆ ಫುಲ್‌ ಜೋರು

09:28 PM Apr 13, 2022 | Team Udayavani |

ಮುಂಬೈ: ಬಾಲಿವುಡ್‌ನ‌ ತಾರೆಗಳಾದ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಮದುವೆ ತಯಾರಿ ಅದ್ಧೂರಿಯಾಗಿ ನಡೆದಿದೆ.

Advertisement

ಮುಂಬೈನ ಚೆಂಬೂರಿನಲ್ಲಿರುವ ರಣಬೀರ್‌ ಕಪೂರ್‌ ಅವರ ಮನೆಯಾದ ವಾಸ್ತು ಮತ್ತು ಆರ್‌ಕೆ ಸ್ಟುಡಿಯೋದಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿವೆ.

ಬುಧವಾರ ಗಣಪತಿ ಪೂಜೆಯೊಂದಿಗೆ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಗುರುವಾರ ಜೋಡಿ ಹಸೆಮಣೆ ಏರಲಿದೆ ಎನ್ನಲಾಗಿದೆ.

ಮೆಹಂದಿ ಕಾರ್ಯಕ್ರಮದಲ್ಲಿ ಆಲಿಯಾ ಅವರ ತಂದೆ ಮಹೇಶ್‌ ಭಟ್‌, ಅಕ್ಕ ಪೂಜಾ ಭಟ್‌, ರಣಬೀರ್‌ ಕಪೂರ್‌ ಅವರ ತಾಯಿ ನೀತು ಕಪೂರ್‌, ಬಾಲಿವುಡ್‌ ನಟಿಯರಾದ ಕರೀನಾ ಕಪೂರ್‌, ಕರೀಶ್ಮಾ ಕಪೂರ್‌, ನಿರ್ದೇಶಕ ಕರಣ್‌ ಜೋಹರ್‌ ಸೇರಿ ಅನೇಕರು ಭಾಗವಹಿಸಿದ್ದರು.

ಅಂದ ಹಾಗೆ ರಣಬೀರ್‌ ಅವರ ತಂದೆ ರಿಷಿ ಕಪೂರ್‌ ಮತ್ತು ತಾಯಿ ನೀತು ಕಪೂರ್‌ 1979ರ ಏ.13ರಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ನವ ಜೋಡಿಯ ಮದುವೆ ಕಾರ್ಯಕ್ರಮವೂ ಏ.13ರಂದೇ ಆರಂಭವಾಗಿರುವುದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next