Advertisement
ಈ ವರ್ಷದ ನವರಾತ್ರಿ ಉತ್ಸವಗಳು ಪವಿತ್ರ ಜ್ಯೋತಿರ್ಲಿಂಗಗಳಿಂದ ಸಾಕಾರಗೊಂಡಿರುವ ಶಿವನ ದೈವಿಕ ಮಹತ್ವವನ್ನು ಆಧರಿಸಿದ್ದವು. ಜತೆಗೆ ಕಲ್ಯಾಣ ರಾಮನ್ ಕುಟುಂಬವು ಗೊಂಬೆಗಳ ಹಬ್ಬದ ಪ್ರದರ್ಶನವಾದ “ಬೊಮ್ಮೆಕೋಲು” ಪ್ರದರ್ಶಿಸುವ ಸಂಪ್ರದಾಯವನ್ನು ಉಳಿಸಿಕೊಂಡು, ಪಾಲಿಸಿಕೊಂಡು ಬರುತ್ತಿದೆ. ಈ ಗೊಂಬೆಗಳು, ದೈನಂದಿನ ದೃಶ್ಯ ರೂಪಕ ಹಾಗೂ ದೇವತೆಗಳಾದ ಸರಸ್ವತಿ, ಪಾರ್ವತಿ, ಲಕ್ಷ್ಮಿಯ ದೈವಿಕ ರೂಪಗಳನ್ನು ಚಿತ್ರಣದ ಮೂಲಕ ಭೌತಿಕ ಮಟ್ಟದಿಂದ ಉನ್ನತ ಆಧ್ಯಾತ್ಮಿಕ ಮಟ್ಟದವರೆಗಿನ ವಿಕಾಸವನ್ನು ಸಂಕೇತಿಸುತ್ತವೆ.
Related Articles
ಕಲ್ಯಾಣ್ ಜ್ಯುವೆಲರ್ಸ್‌ನ ಪ್ರಾದೇಶಿಕ ಪ್ರಚಾರ ರಾಯಭಾರಿಗಳಾದ ಪ್ರಭು ಗಣೇಶನ್ (ತಮಿಳುನಾಡು), ಅಕ್ಕಿನೇನಿ ನಾಗಾರ್ಜುನ (ಆಂಧ್ರಪ್ರದೇಶ ಮತ್ತು ತೆಲಂಗಾಣ), ಕಿಂಜಲ್ ರಾಜಪ್ರಿಯಾ (ಗುಜರಾತ್) ಮತ್ತು ವಾಮಿಕಾ ಗಬ್ಬಿ (ಪಂಜಾಬ್) ಉಪಸ್ಥಿತಿಯೊಂದಿಗೆ ಸಂಜೆಯ ಪೂಜಾ ಸಮಾರಂಭಕ್ಕೆ ಹೊಸ ಮೆರುಗು ನೀಡಿದರು.
Advertisement