Advertisement

ಶಾರುಖ್‌ ʼಜವಾನ್‌ʼ ಜೊತೆ ಸಲ್ಮಾನ್‌ ʼಟೈಗರ್-3‌ʼ ಟೀಸರ್‌ ರಿಲೀಸ್‌? ಥ್ರಿಲ್‌ ಆದ ಫ್ಯಾನ್ಸ್

04:22 PM Jul 24, 2023 | Team Udayavani |

ಮುಂಬಯಿ: ಶಾರುಖ್‌ ಅವರ ʼಜವಾನ್‌ʼ ಹಾಗೂ ಸಲ್ಮಾನ್‌ ಖಾನ್‌ ಅವರ ʼಟೈಗರ್-3‌ʼ ಈ ವರ್ಷ ರಿಲೀಸ್‌ ಆಗಲಿರುವ ಬಾಲಿವುಡ್‌ ನ ದೊಡ್ಡ ಸಿನಿಮಾಗಳು. ಈ ಸಿನಿಮಾಗಳಿಗಾಗಿ ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ. ʼಟೈಗರ್-3ʼ ಯಲ್ಲಿ ಶಾರುಖ್‌ ಖಾನ್‌ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತಹೂಲ ದುಪ್ಟಟ್ಟಿಗೆ ಕಾರಣವಾಗಿದೆ.

Advertisement

ಸಿನಿಮಾರಂಗದ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಇತ್ತೀಚೆಗೆ ʼಟೈಗರ್-3‌ʼ ಸಿನಿಮಾದ ಪ್ರಚಾರ ನಕ್ಷೆಯನ್ನು ರಿವೀಲ್‌ ಮಾಡಿದ್ದಾರೆ.

ಶಾರುಖ್‌ ಖಾನ್‌ ಅವರ ʼಜವಾನ್‌ʼ ಸಿನಿಮಾ ಸೆಪ್ಟೆಂಬರ್‌ 7 ರಂದು ರಿಲೀಸ್‌ ಆಗಲಿದೆ. ಈ ಸಿನಿಮಾ ರಿಲೀಸ್‌ ದಿನವೇ ಥಿಯೇಟರ್‌ ನಲ್ಲಿ ಸಲ್ಮಾನ್‌ ಖಾನ್‌ ಅವರ ʼಟೈಗರ್-3‌ʼ ಸಿನಿಮಾದ ಮೊದಲ ಟೀಸರ್‌ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Jailer: 15 ಸೆಕೆಂಡ್‌ ಗಳಲ್ಲೇ ʼಜೈಲರ್‌ʼ‌ ಆಡಿಯೋ ಲಾಂಚ್ ಉಚಿತ ಪಾಸ್‌ ಸೋಲ್ಡ್‌ ಔಟ್

ಹೇಗಿರಲಿದೆ ʼಟೈಗರ್-3‌ʼ ಪ್ರಚಾರ:  

Advertisement

15 ಆಗಸ್ಟ್ – ಪಾತ್ರದ ಟೀಸರ್

7 ಸೆಪ್ಟೆಂಬರ್ – ಟೈಗರ್ 3 ಟೀಸರ್ [ಜವಾನ್ ಜೊತೆಗೆ ಟೀಸರ್‌ ರಿಲೀಸ್]

28 ಸೆಪ್ಟೆಂಬರ್ – ಮೊದಲ ಟ್ರೈಲರ್ ರಿಲೀಸ್

6 ಅಕ್ಟೋಬರ್ – ಮೊದಲ ಹಾಡು

16 ಅಕ್ಟೋಬರ್ – ಎರಡನೇ ಹಾಡು

25 ಅಕ್ಟೋಬರ್ – ಎರಡನೇ ಟ್ರೇಲರ್

2 ನವೆಂಬರ್ – ಶಾರುಖ್ ಖಾನ್ ಪೋಸ್ಟರ್

7 ರಿಂದ 9 ನವೆಂಬರ್ – ಪ್ರೋಮೋ

10 ನವೆಂಬರ್ – ಗ್ರ್ಯಾಂಡ್ ವರ್ಲ್ಡ್‌ ವೈಡ್ ಬಿಡುಗಡೆ

ಎಂದು  ಮನೋಬಾಲಾ ವಿಜಯಬಾಲನ್‌ ಟ್ವೀಟ್‌ ಮಾಡಿದ್ದಾರೆ. ಇದು ತಾತ್ಕಾಲಿಕ ಯೋಜನೆ ಎಂದು ಅವರು ಬರೆದುಕೊಂಡಿದ್ದಾರೆ.

2012 ರಲ್ಲಿ ʼಏಕ್ ಥಾ ಟೈಗರ್ʼ ರಿಲೀಸ್‌ ಆಗಿತ್ತು. ಇದನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದರು. ಇದರ ನಂತರ 2017 ರಲ್ಲಿ ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ ʼಟೈಗರ್ ಜಿಂದಾ ಹೈʼ ರಿಲೀಸ್‌ ಆಗಿತ್ತು. ಇದೀಗ ಟೈಗರ್‌ -3 ಸಿನಿಮಾವನ್ನು ಮನೀಶ್‌ ಶರ್ಮಾ ಅವರು ನಿರ್ದೇಶನ ಮಾಡಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next