Advertisement

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

01:07 PM Jun 06, 2023 | Team Udayavani |

ಮುಂಬಯಿ: ಫಹಾದ್ ಜಿರಾರ್ ಅಹ್ಮದ್ ಎನ್ನುವವರು ಮದುವೆಯಾಗಿದ್ದ ನಟಿ ಸ್ವರಾ ಭಾಸ್ಕರ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ಸ್ವತಃ ನಟಿಯೇ ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ.

Advertisement

ಕೇಂದ್ರ ಸರ್ಕಾರದ ಸಿಎಎ (ಪೌರತ್ವ ಕಾಯ್ದೆ) ಕಾಯ್ದೆ ಸೇರಿದಂತೆ, ಸರ್ಕಾರದ ಅನೇಕ ವಿಚಾರಗಳನ್ನು ವಿರೋಧಿಸಿ ಟ್ರೋಲ್‌ ಗೆ ಒಳಗಾಗಿ, ವಿವಾದದಿಂದ ಸುದ್ದಿಯಾದ ನಟಿ ಸ್ವರಾ ಭಾಸ್ಕರ್‌ ಇದೇ ವರ್ಷದ ಫೆಬ್ರವರಿಯಲ್ಲಿ ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮಹಾರಾಷ್ಟ್ರ ಮೂಲದ ಯುವ ರಾಜಕಾರಣಿಯಾಗಿರುವ ಫಹಾದ್ ಜಿರಾರ್ ಅಹ್ಮದ್ ಅವರೊಂದಿಗೆ ಕೋರ್ಟ್‌ ನಲ್ಲಿ ವಿವಾಹವಾಗಿರುವ ಬಗ್ಗೆ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಆ ಬಳಿಕ ಆತ್ಮೀಯರ ಸಮ್ಮುಖದಲ್ಲಿ ಮಾರ್ಚ್‌ ತಿಂಗಳಿನಲ್ಲಿ  ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು.

ಇದನ್ನೂ ಓದಿ: Guarantee Scheme ಬಗ್ಗೆ ಪ್ರತಿಭಟನೆ ಮಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ; ಸಿದ್ದರಾಮಯ್ಯ

ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎನ್ನುವ ವಿಚಾರಕ್ಕೆ ನಟಿಯನ್ನು ಅನೇಕ ಮಂದಿ ಟ್ರೋಲ್‌ ಮಾಡಿದ್ದರು. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಈ ಬಗ್ಗೆ ನಟಿ ಸ್ವರಾ ಭಾಸ್ಕರ್‌ ಅವರೇ ಟ್ವೀಟ್‌ ಮಾಡಿದ್ದಾರೆ.

“ಕೆಲವೊಮ್ಮೆ ನಿಮ್ಮ ಎಲ್ಲಾ ಪ್ರಾರ್ಥನೆಗಳು ಒಟ್ಟಿಗೆ ಉತ್ತರಿಸಲ್ಪಡುತ್ತವೆ! ಹೊಸ ಪ್ರಪಂಚಕ್ಕೆ ಕಾಲಿಡಲು ಉತ್ಸುಕತೆಯಿಂದ ಇದ್ದೇನೆ” ಎಂದು ಪತಿಯೊಂದಿಗೆ ಕೂತಿರುವ ಬೇಬಿ ಬಂಪ್‌ ಪೋಟೋವನ್ನು ಹಂಚಿಕೊಂಡಿದ್ದಾರೆ.

Advertisement

ಸಿಎಎ ಕಾಯ್ದೆಯನ್ನು ವಿರೋಧಿಸುವ ಸಮಯದಲ್ಲಿ ಸ್ವರಾ ಭಾಸ್ಕರ್‌ ಫಹಾದ್ ಅವರನ್ನು ಭೇಟಿಯಾಗಿದ್ದರು. ಅಲ್ಲಿಂದ ಇಬ್ಬರು ಆತ್ಮೀಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next