Advertisement

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಗೆ ಹುಟ್ಟುಹಬ್ಬದ ಸಂಭ್ರಮ: ಶುಭಾಶಯಗಳ ಮಹಾಪೂರ !

12:42 PM Jul 16, 2020 | Mithun PG |

ಮುಂಬೈ: ಬಾಲಿವುಡ್ ಬಾರ್ಬಿ ಡಾಲ್ ಕತ್ರಿನಾ ಕೈಫ್ ಗೆ ಇಂದು 37ನೇ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಬಾಲಿವುಡ್ ತಾರೆಯರು, ಅಭಿಮಾನಿಗಳು ಸೇರಿದಂತೆ ಎಲ್ಲಡೆಯಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದ್ದು ಟ್ವಿಟ್ಟರ್ ನಲ್ಲಿ #HBDKatrinaKaif ಟ್ರೆಂಡ್ ಆಗಿವೆ.

Advertisement

ಕತ್ರಿನಾ ಕೈಫ್ ತನ್ನ ಸೌಂದರ್ಯದಿಂದಲೇ ಅಭಿಮಾನಿ ಬಳಗವನ್ನು ಹೊಂದಿರುವರು. ಮೂಲತಃ ಹಾಂಗ್ ಕಾಂಗ್ ನವರಾಗಿರುವ ಇವರು ‘ಬೂಮ್’ ಸಿನಿಮಾದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಆ ಬಳಿಕ ಅನೇಕ ಹಿಂದಿ ಸಿನಿಮಾಗಳಲ್ಲಿ ನಾಯಕಿ ಪಾತ್ರವನ್ನು ಮಾಡಿದ್ದಾರೆ.  1999ರಲ್ಲೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರೂ 2003 ರಲ್ಲಿ ಬಿಡುಗಡೆಯಾದ ‘ಬೂಮ್’ ಅವರ ಜೀವನಕ್ಕೊಂದು ತಿರುವು ನೀಡಿದ್ದಲ್ಲದೆ ಅಪಾರ ಖ್ಯಾತಿಗೆ ಪಾತ್ರರಾದರು.

2004ರಲ್ಲಿ ವಿಜಯ್ ಭಾಸ್ಕರ್ ನಿರ್ದೇಶನ ಮಾಡಿದ ಮಲ್ಲೇಶ್ವರಿ ತೆಲುಗು ಸಿನಿಮಾದಲ್ಲಿ ಅವಕಾಶ ಪಡೆದು ನಟಿಸಿದರು.  ನಂತರದಲ್ಲಿ  ‘ಸರ್ಕಾರ್, ‘ಮೈನ್ ಫ್ಯಾರ್ ಕ್ಯೂ ಕಿಯಾ’‘ಹಮ್ ದಿವಾನ್ ಕರ್ ಗಯೇ’‘ಅಲ್ಲರಿ ಪಿಡುಗು’ ಸಿನಿಮಾದಲ್ಲಿ ನಟಿಸಿದರು.

Advertisement

ಐ.ವಿ ಶಶಿ ನಿರ್ದೇಶನದ ಬಲರಾಂ V/S ತೊಡರ್ದಾಸ್ ಸಿನಿಮಾದಲ್ಲಿ ಸುಪ್ರಿಯಾ ಮೆನನ್ ಪಾತ್ರ ನಿರ್ವಹಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಪರಿಚಿತರಾಗಿದ್ದರು.  ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿರುವ ಕತ್ರಿನಾ ಬಾಲಿವುಡ್​​ನ ಬೇಡಿಕೆಯ ನಟಿಯಾಗಿದ್ದಾರೆ. ಒಟ್ಟಾರೆ 40 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ.

ಸದ್ಯ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸಿನಿಮಾದಲ್ಲಿ ಕತ್ರಿನಾ ಅಭಿನಯಿಸಿದ್ದಾರೆ. ಈಗಾಗಲೇ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಕತ್ರಿನಾ ಅವರು ತನ್ನ ದೇಹವನ್ನು ಹಾಗೆ ಫಿಟ್ ಆಗಿ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಅವರು ಶಿಸ್ತಿನ ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯನ್ನು ಅನುಸರಿಸಿಕೊಂಡು ಬಂದಿದ್ದು, ತನ್ನ ತೂಕ ಇಳಿಸುವ ಕ್ರಮದಿಂದ ಅವರು ಈಗಾಗಲೇ ಎಲ್ಲರನ್ನು ಅಚ್ಚರಿಗೀಡು ಮಾಡಿರುವರು. `ತೀಸ್ ಮಾರ್ ಖಾನ್’ಚಿತ್ರದ ವೇಳೆ ಕತ್ರಿನಾ ತನ್ನ ಸಪೂರ, ಮಾದಕ ಹಾಗೂ ಮೋಹಕ ದೇಹದಿಂದ ಎಲ್ಲರನ್ನು ಅಚ್ಚರಿಗೀಡು ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next