Advertisement

Fighter first look: ಸ್ವಾತಂತ್ರ್ಯ‌ ದಿನಕ್ಕೆ ʼಫೈಟರ್‌ʼ ನಿಂದ ಸ್ಪೆಷೆಲ್‌ ಟೀಸರ್‌ ಗಿಫ್ಟ್

12:19 PM Aug 15, 2023 | Team Udayavani |

ಮುಂಬಯಿ: ಎಲ್ಲೆಡೆ 77ನೇ ಸ್ವಾತಂತ್ರ್ಯ‌ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ಬಣ್ಣದ ಲೋಕದಲ್ಲಿ ತಾರೆಯರು ಸ್ವಾತಂತ್ರ್ಯ ದಿನದ ಶುಭಾಶಯವನ್ನು‌ ಕೋರುತ್ತಿರುವುದರ ಜೊತೆ ತಮ್ಮ ಹೊಸ ಸಿನಿಮಾದ ವಿಶೇಷ ಪೋಸ್ಟರ್‌ ಗಳನ್ನು ರಿಲೀಸ್‌ ಮಾಡಿದ್ದಾರೆ.

Advertisement

ಬಾಲಿವುಡ್‌ನ  ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ʼಫೈಟರ್‌ʼ ಸ್ವಾತಂತ್ರ್ಯ ದಿನಕ್ಕೆ ವಿಶೇಷ ಟೀಸರ್‌ ರಿಲೀಸ್‌ ಮಾಡಿದೆ.

ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಅಭಿನಯದ ʼಫೈಟರ್‌ʼ ಸಿನಿಮಾ ಬಾಲಿವುಡ್‌ ನ ಬಹು ನಿರೀಕ್ಷಿತ ಹಾಗೂ ಬಿಗ್‌ ಬಜೆಟ್‌ ಸಿನಿಮಾ. ಸಿನಿಮಾ ಅನೌನ್ಸ್‌ ಆದ ದಿನದಿಂದಲೂ ಸಿನಿಮಾದ ಬಗ್ಗೆ ದೊಡ್ಡಮಟ್ಟದ ಹೈಪ್‌ ಕ್ರಿಯೇಟ್‌ ಆಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ “ಸ್ಪಿರಿಟ್ಆಫ್ ಫೈಟರ್ “, | ವಂದೇ ಮಾತರಂ! ಎಂದು ಬರೆದುಕೊಂಡಿರುವ ಶಾರ್ಟ್‌ ಟೀಸರ್‌ ಕ್ಲಿಪಿಂಗ್‌ ನ್ನು ಚಿತ್ರತಂಡ ರಿಲೀಸ್‌ ಮಾಡಿದೆ. ಹೃತಿಕ್, ದೀಪಿಕಾ ಮತ್ತು ಅನಿಲ್ ವಾಯುಪಡೆ ಅಧಿಕಾರಿಗಳ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಝಲಕ್‌ ನ್ನ ಟೀಸರ್‌ ನಲ್ಲಿ ತೋರಿಸಲಾಗಿದೆ.

ಬಾಲಿವುಡ್‌ ನಲ್ಲಿ ʼವಾರ್‌ʼ, ʼಪಠಾಣ್‌ʼ ನಂತಹ ಚಿತ್ರಗಳನ್ನು ನೀಡಿರುವ ಸಿದ್ದಾರ್ಥ್‌ ಆನಂದ್‌ ಅವರು ʼʼಫೈಟರ್‌ʼʼ ಸಿನಿಮಾಕ್ಕೆ‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ʼಫೈಟರ್‌ʼ 2024 ರ ಜನವರಿ, 25 ರಂದು ಸಿನಿಮಾ ರಿಲೀಸ್‌ ಆಗಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next