Advertisement

ಬಾಲಿವುಡ್‌ನ ಕೊರಿಯೋಗ್ರಾಫರ್ ಸರೋಜ್ ಖಾನ್ ನಿಧನ

08:29 AM Jul 03, 2020 | Lakshmi GovindaRaj |

ಮುಂಬೈ: ಬಾಲಿವುಡ್‍ನ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ (71) ಹೃದಯಾಘಾತದಿಂದ ಮುಂಜಾನೆ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಸರೋಜ್ ಖಾನ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಜೂನ್‌ 20ರಂದು ಮುಂಬೈನ ಬಾಂದ್ರಾದಲ್ಲಿರುವ ಗುರು ನಾನಕ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಅವರಿಗೆ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೇ  ಹೃದಯಾಘಾತವಾಗಿ ನಿಧನರಾಗಿದ್ದಾರೆ.

Advertisement

1974ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ “ನಾಮ್’ ಮೂಲಕ ನೃತ್ಯ ಸಂಯೋಜಕಿಯಾಗಿ ಬೆಳಕಿಗೆ ಬಂದ ಸರೋಜ್ ಖಾನ್, ಬಾಲಿವುಡ್‌ನ ಅನೇಕ ಹಿಟ್ ಚಿತ್ರಗಳಲ್ಲಿ ನೃತ್ಯ ಸಂಯೋಜಕಿಯಾಗಿ ಗುರುತಿಸಿಕೊಂಡಿದ್ದು, ಸುಮಾರು 2 ಸಾವಿರಕ್ಕೂ ಅಧಿಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನು ಸರೋಜ್ ಕೊನೆಯಾದಾಗಿ 2019ರಲ್ಲಿ ತೆರೆಕಂಡ “ಕಳಂಕ್‌’ ಚಿತ್ರದ ತಬಾ ಹೊಗಾಯೆ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು.

ಒಟ್ಟು ಮೂರು ಬಾರಿ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿರುವ ಸರೋಜ್ ಖಾನ್, ಪತಿ ಸೋಹನ್‌ಲಾಲ್, ಪುತ್ರ ಹಮೀದ್ ಖಾನ್ ಹಾಗೂ ಪುತ್ರಿ ಹೀನಾ ಖಾನ್ ಅವರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next