Advertisement

Bollywood: ವರುಣ್‌ ಧವನ್‌ ʼಬೇಬಿ ಜಾನ್‌ʼ ರಿಲೀಸ್‌ ಡೇಟ್ ಔಟ್:‌ ಆಮೀರ್‌ ಚಿತ್ರಕ್ಕೆ ಟಕ್ಕರ್

03:06 PM Jun 26, 2024 | Team Udayavani |

ಮುಂಬಯಿ: ವರುಣ್‌ ಧವನ್‌(Varun Dhawan) ಮಾಸ್‌ ಲುಕ್‌ ನಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಬಾಲಿವುಡ್‌ ಸಿನಿಮಾ ʼಬೇಬಿ ಜಾನ್‌ʼ(Baby John) ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Advertisement

ವರುಣ್ ಧವನ್‌ ಜೊತೆ ಸಿನಿಮಾದಲ್ಲಿ ಕೀರ್ತಿ ಸುರೇಶ್‌ (Keerthy Suresh) ಕಾಣಿಸಿಕೊಳ್ಳಲಿದ್ದಾರೆ ಆ ಮೂಲಕ ಬಾಲಿವುಡ್‌ ಗೆ ಎಂಟ್ರಿ ಕೊಡಲಿದ್ದಾರೆ. ಇವರೊಂದಿಗೆ ಚಿತ್ರದಲ್ಲಿ ವಾಮಿಕಾ ಗಬ್ಬಿ ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪೋಸ್ಟರ್‌ ಹಾಗೂ ಟೀಸರ್‌ ಲುಕ್‌ ನಿಂದ ಸಖತ್‌ ಗಮನ ಸೆಳೆದ ʼಬೇಬಿ ಜಾನ್‌ʼ ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಇಷ್ಟುಹೊತ್ತಿಗೆ ರಿಲೀಸ್‌ ಆಗಿರಬೇಕಿತ್ತು. ಕಾರಣಾಂತರಗಳಿಂದ ರಿಲೀಸ್‌ ಡೇಟ್‌ ಮುಂದೂಡಿಕ ಆಗಿತ್ತು. ಇದೀಗ ಹೊಸ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

ಡಿ.25 ರಂದು, ಕ್ರಿಸ್ಮಸ್‌ ಹಬ್ಬದ ಸಂದರ್ಭದಲ್ಲಿ ʼಬೇಬಿ ಜಾನ್‌ʼ ವರ್ಲ್ಡ್‌ ವೈಡ್‌ ತೆರೆ ಕಾಣಲಿದೆ ಎಂದು ಚಿತ್ರತಂಡ ಹೊಸ ಪೋಸ್ಟರ್‌ ನೊಂದಿಗೆ ಅನೌನ್ಸ್‌ ಮಾಡಿದೆ.

ವಿಶೇಷವೆಂದರೆ ಇದೇ ಸಮಯದಲ್ಲಿ ಆಮೀರ್‌ ಖಾನ್‌ ಅವರ ʼಸಿತಾರೆ ಜಮೀನ್ ಪರ್ʼ ಚಿತ್ರ ರಿಲೀಸ್‌ ಆಗಲಿದೆ. ʼಲಾಲ್‌ ಚಡ್ಡಾʼ ಬಳಿಕ ಆಮೀರ್‌ ಮತ್ತೆ ಬಣ್ಣದ ಲೋಕ್ಕೆ ಎಂಟ್ರಿ ಕೊಡಲಿದ್ದು, ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

Advertisement

ಈ ಎರಡೂ ಚಿತ್ರಗಳು ಒಂದೇ ದಿನ ರಿಲೀಸ್‌ ಆದರೆ ಬಾಕ್ಸ್‌ ಆಫೀಸ್‌ ನಲ್ಲಿ ಪೈಪೋಟಿ ಉಂಟಾಗುವುದು ಖಚಿತವೆಂದು ಹೇಳಲಾಗುತ್ತಿದೆ.

ʼಬೇಬಿ ಜಾನ್‌ʼ ಅಟ್ಲಿ(Atlee Kumar) ಅವರ ʼಥೇರಿʼ ಸಿನಿಮಾದ ಹಿಂದಿ ರಿಮೇಕ್‌ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಮುರಾದ್ ಖೇತಾನಿ, ಅಟ್ಲಿ ಕುಮಾರ್‌, ಪ್ರಿಯಾ  ಅಟ್ಲಿ ಮತ್ತು ಜಿಯೋ ಸ್ಟುಡಿಯೋಸ್  ನಿರ್ಮಾಣ ಮಾಡಲಿದೆ.

ಕಾಲೀಸ್ ನಿರ್ದೇಶನದ ಈ ಸಿನಿಮಾದಲ್ಲಿ ವರುಣ್‌ ಧವನ್‌ ಜೊತೆ ಜಾಕಿ ಶ್ರಾಫ್ , ರಾಜ್ಪಾಲ್ ಯಾದವ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next