ಮುಂಬೈ: ಶಾಲಾ-ಕಾಲೇಜುಗಳ ಪಠ್ಯದಲ್ಲಿ ಭಗವದ್ಗೀತೆಸೇರಿಸಬೇಕೆಂದು ಬಾಲಿವುಡ್ ನಟಿ ಮೌನಿ ರಾಯ್ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚಿಗೆ ಮಾಧ್ಯಮಗಳ ಜೊತೆ ಮಾತಾಡಿರುವ ಅವರು ತಮ್ಮ ಮೇಲೆ ಭಗವದ್ ಗೀತೆಯು ಬೀರಿದ ಪ್ರಭಾವದ ಬಗ್ಗೆ ಹೇಳಿಕೊಂಡಿದ್ದಾರೆ. ಲಾಕ್ ಡೌನ್ ವೇಳೆ ಭಗವದ್ಗೀತೆಬಗ್ಗೆ ತಿಳಿದುಕೊಂಡಿರುವ ಅವರು, ನಮ್ಮ ಭಗವದ್ಗೀತೆವಿದ್ಯಾರ್ಥಿಗಳಿಗೆ ಪಠ್ಯದ ರೂಪದಲ್ಲಿ ಬೋಧಿಸಬೇಕೆಂದಿದ್ದಾರೆ.
ಬಾಲ್ಯದಲ್ಲಿ ಭಗವದ್ಗೀತೆ ಓದಿದ್ದೆ. ಆದರೆ, ಇಂದಿಗೂ ಅದನ್ನೂ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿಂದೆ ನನ್ನ ಸ್ನೇಹಿತೆ ಭಗವದ್ಗೀತೆಓದಲು ಶುರು ಮಾಡಿದ್ದಳು. ನಾನು ಅಲ್ಲಿಗೆ ಹೋಗುತ್ತಿದ್ದೆ. ಆದರೆ, ಕೆಲಸದ ಒತ್ತಡದಿಂದಾಗಿ ಸಮರ್ಪಕವಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ, ಲಾಕ್ ಡೌನ್ ವೇಳೆ ನನಗೆ ಧಾರ್ಮಿಕತೆಯಲ್ಲಿ ಶ್ರದ್ಧೆ ಬೆಳೆಯಿತು. ಭಗವದ್ಗೀತೆ ಓದಿದೆ. ಇದು ಶಾಲೆಗಳ ಪಠ್ಯದಲ್ಲಿ ಸೇರಬೇಕೆಂದು ನನಗೆ ಅನಿಸಿತು ಎಂದಿದ್ದಾರೆ.
ಇನ್ನು ಭಗವದ್ಗೀತೆ ಧಾರ್ಮಿಕ ಗ್ರಂಥಕ್ಕಿಂತ ಮಿಗಿಲಾದದ್ದು ಎಂದು ನನ್ನ ಪ್ರಾಮಾಣಿಕ ಅಭಿಪ್ರಾಯ. ಇದು ಜೀವನ ಸಾರಾಂಶ. ನಿಮ್ಮ ತಲೆಯಲ್ಲಿರುವ ಯಾವುದೇ ಪ್ರಶ್ನೆಗೆ ಭಗವದ್ ಗೀತೆಯಲ್ಲಿ ಉತ್ತರ ಸಿಗುತ್ತದೆ ಎಂದಿದ್ದಾರೆ ನಟಿ.
ಇನ್ನು ಚಿತ್ರರಂಗಕ್ಕೆ ಭಗವದ್ಗೀತೆ ಯ ಬೋಧನೆ ಅಗತ್ಯ ಎಷ್ಟು? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ಕೇವಲ ಭಾರತ, ಬಾಲಿವುಡ್ ಅಥವಾ ಶಾಲಾ ಮಕ್ಕಳಿಗೆ ಅಲ್ಲ ಇಡೀ ಪ್ರಪಂಚಕ್ಕೆ ಗೀತೆಯ ಅಗತ್ಯತೆ ಇದೆ ಎಂದು ಮೌನಿ ರಾಯ್ ಹೇಳಿದ್ದಾರೆ.