Advertisement

ಹಸೆಮಣೆ ಏರಲಿದ್ದಾರಂತೆ ಬಾಲಿವುಡ್ ನಟಿ ಕತ್ರಿನಾ

03:45 PM Jul 18, 2021 | Team Udayavani |

ಬಾಲಿವುಡ್ ಕ್ಯಾಟ್ ಕತ್ರಿನಾ ಕೈಫ್ ಅವರು ಮದುವೆಯಾಗಲಿದ್ದಾರಂತೆ. ಈ ಚೆಲುವೆಯ ಕಲ್ಯಾಣ ಶೀಘ್ರವೇ ನೆರವೇರಲಿದೆ. ಇಂತಹದೊಂದು ಸುದ್ದಿ ಬಿಟೌನ್ ನಲ್ಲಿ ಸಖತ್ ಸದ್ದು ಮಾಡ್ತಿದೆ.

Advertisement

ಹೌದು, ಕತ್ರಿನಾ ಕೈಫ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 38ನೇ ವಂಸತಕ್ಕೆ ಕಾಲಿಟ್ಟಿರುವ ನಟಿ ಕತ್ರಿನಾ ಸರಳವಾಗಿ ಜನ್ಮದಿನ ಸಂಭ್ರಮಿಸಿದ್ದಾರೆ. ಕತ್ರಿನಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ.

ಇದರ ಬೆನ್ನಲ್ಲೇ ಈಗ ಕತ್ರಿನಾ ಕೈಫ್ ಮದುವೆ ವಿಚಾರ ಸದ್ದು ಮಾಡುತ್ತಿದ್ದಾರೆ. ಕತ್ರಿಕಾ ಕೈಫ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ. ಕತ್ರಿನಾ ಮದುವೆ ಸುಳಿವು ನೀಡಿದ್ದಾರೆ ಸಲ್ಮಾನ್ ಖಾನ್ ಕಾಸ್ಟ್ಯೂಮ್ ಡಿಸೈನರ್. ಕತ್ರಿನಾ ಕೈಫ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಸಲ್ಮಾನ್ ಡಿಸೈನರ್ ಆಶ್ಲೇ ರೆಬೆಲ್ಲೋ ಕತ್ರಿನಾ ಮದುವೆ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಅಂದಹಾಗೆ ಡಿಸೈನರ್ ಆಶ್ಲೇ, ಮದುಮಗಳ ಹಾಗೆ ಕಾಣಿಸುತ್ತಿರುವ ನಟಿ ಕತ್ರಿನಾ ಬಿಳಿ ಬಣ್ಣದ ಗೌನ್ ಧರಿಸಿರುವ ಫೋಟೋವನ್ನು ಶೇರ್ ಮಾಡಿ, “ಇದು ಆದಷ್ಟು ಬೇಗ ಸಂಭವಿಸಲಿದೆ” ಎಂದು ಹೇಳಿದ್ದಾರೆ. ಡಿಸೈನರ್ ಆಶ್ಲೇ, ಕತ್ರಿನಾ ಅವರಿಗೂ ಉತ್ತಮ ಸ್ನೇಹಿತರಾಗಿದ್ದು ಕತ್ರಿನಾ ಈ ಪೋಸ್ಟ್ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next