Advertisement

Btown: ಗಂಡು ಮಗುವಿಗೆ ಜನ್ಮವಿತ್ತ ಇಲಿಯಾನಾ; ತಂದೆ ಯಾರೆನ್ನುವ ಸೀಕ್ರೆಟ್‌ ಬಿಟ್ಟು ಕೊಡದ ನಟಿ

09:11 AM Aug 06, 2023 | Team Udayavani |

ಮುಂಬಯಿ: ಬಿಟೌನ್ ಬೆಡಗಿ ಇಲಿಯಾನಾ ಡಿಕ್ರೂಜ್‌  ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಫೋಟೋ ಹಾಗೂ ಹೆಸರನ್ನು ಇನ್‌ ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ.

Advertisement

ಇದೇ ವರ್ಷದ ಏ.18 ರಂದು ನಟಿ  ಇಲಿಯಾನಾ ಡಿಕ್ರೂಜ್‌ ಗರ್ಭಿಣಿಯಾಗಿರುವ ಕುರಿತ ವಿಚಾರವನ್ನು  ಪೋಸ್ಟ್‌ ಹಾಕುವ ಮೂಲಕ ಹಂಚಿಕೊಂಡಿದ್ದರು.

ʼರುಸ್ತುಂʼ ಬೆಡಗಿ ಇಲಿಯಾನಾ ಮಗುವಿಗೆ ಹಾಕುವ ಬಟ್ಟೆಯೊಂದನ್ನು ಹಾಕಿ ಅದರಲ್ಲಿ ʼಅಡ್ವೆಂಚರ್‌ ಬೀಗೆನ್ಸ್‌ʼ ಎಂದು ಬರೆದುಕೊಂಡಿದ್ದು, ಇನ್ನೊಂದು ಫೋಟೋದಲ್ಲಿ ಕುತ್ತಿಗೆಗೆ ಹಾಕಿರುವ ಪೆಂಡೆಂಟ್ ವೊಂದರಲ್ಲಿ ʼಅಮ್ಮಾʼ (Mama) ಎಂದು ಬರೆದಿದೆ. ಪೋಸ್ಟ್‌ ಕೆಳಗೆ ಮಗುವನ್ನು ನೋಡುವ ಸಂತಸದಲ್ಲಿದ್ದೇನೆ ಎಂದು ಬರೆದಿಕೊಂಡಿದ್ದರು.

ಮದುವೆಗೂ ಮುನ್ನ ಗರ್ಭಿಣಿ ಆಗಿದ್ದ ನಟಿಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಲವು ಗಾಸಿಪ್‌ ಗಳು ಹಬ್ಬಿತ್ತು. ಇತ್ತೀಚೆಗೆ ನಟಿ ಡೇಟ್‌ ನೈಟ್‌ ಎನ್ನುವ ಸ್ಟೋರಿಯನ್ನು ಹಾಕಿಕೊಂಡಿದ್ದರು. ನನ್ನ ಕೆಟ್ಟ ಘಳಿಗೆಯಲ್ಲಿ ಬೆಂಬಲವನ್ನು ನೀಡಿದ ಅದ್ಭುತ ವ್ಯಕ್ತಿಯೆಂದು ಅದರಲ್ಲಿ ಬರೆದುಕೊಂಡಿದ್ದರು. ಆದರೆ ಅದು ಅವರ ಪ್ರಿಯಕರ ಎನ್ನುವುದನ್ನು ಅವರು ಎಲ್ಲೂ ರಿವೀಲ್‌ ಮಾಡಿಲ್ಲ.

ಇದೀಗ ಇಲಿಯಾನಾ ಗಂಡು ಮಗುವಿನ ಜನ್ಮ ನೀಡಿದ್ದಾರೆ. ಈ ಬಗ್ಗೆ ಅವರು ಶನಿವಾರ ಸೋಶಿಯಲ್‌ ಮೀಡಿಯಾದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮಗುವಿನ ಫೋಟೋವನ್ನು ರಿವೀಲ್‌ ಮಾಡಲ್ಲ. ಆದರೆ ನಟಿ ಇಲಿಯಾನಾ ಮಗುವಿನ ಫೋಟೋವನ್ನು ರಿವೀಲ್‌ ಮಾಡಿದ್ದಾರೆ.

Advertisement

ಮಗುವಿಗೆ ಕೋವಾ ಫೀನಕ್ಸ್ ಡೋಲನ್ ಎಂದು ನಾಮಕರಣ ಮಾಡಿದ್ದು, ಆಗಸ್ಟ್‌ 1 ರಂದು ಮಗು ಜನಿಸಿದೆ ಎಂದು ಫೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

“ನಮ್ಮ ಪ್ರೀತಿಯ ಮಗನನ್ನು ಸ್ವಾಗತಿಸಲು ನಾವು ಎಷ್ಟು ಸಂತೋಷಪಡುತ್ತಿದ್ದೇವೆ ಎನ್ನುವುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ” ಎಂದು ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

ನಟಿಯರಾದ ಹುಮಾ ಖುರೇಷಿ, ಅಥಿಯಾ ಶೆಟ್ಟಿ, ನರ್ಗಿಸ್ ಫಕ್ರಿ ಮತ್ತು ಸೋಫಿ ಚೌದ್ರಿ ಮುಂತಾದವರು ಇಲಿಯಾನಾ ಅವರಿಗೆ ಶುಭಕೋರಿದ್ದಾರೆ.

ಇಲಿಯಾನಾ ಕೊನೆಯ ಬಾರಿಗೆ ಬಾದ್‌ಶಾ ಅವರ ‘ಸಬ್ ಗಜಾಬ್’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ  ಅಭಿಷೇಕ್ ಬಚ್ಚನ್ ಜೊತೆಗಿನ ‘ದಿ ಬಿಗ್ ಬುಲ್’ ಚಿತ್ರದಲ್ಲಿ ನಟಿಸಿದ್ದಾರೆ. ಮುಂದೆ ರಣದೀಪ್ ಹೂಡಾ ಅವರೊಂದಿಗೆ ‘ಅನ್‌ಫೇರ್ ಅಂಡ್ ಲವ್ಲಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next