Advertisement
ಇನ್ನೂ ಹತ್ತಿರದ ಪರಿಚಯ ಹೇಳಬೇಕೆಂದರೆ ನಟಿ ನೇಹಾ ಶರ್ಮಳ ತಂಗಿ. ಅಕ್ಕ ನಯನಾಜೂಕಿನ, ತಗ್ಗಿಬಗ್ಗಿ ನಡೆಯುವ ಸ್ವಭಾದವಳಾದರೆ, ತಂಗಿ ಇದಕ್ಕೆ ತದ್ವಿರುದ್ಧ ಸ್ವಭಾದವಳು. ಸತ್ಯಮೇವ ಜಯತೇ ಚಿತ್ರದಲ್ಲಿ ಜಾನ್ ಅಬ್ರಹಾಂಗೆ ನಾಯಕಿಯಾಗಿ ನಟಿಸುತ್ತಿರುವ ಐಶಾ ತನ್ನ ಬೋಲ್ಡ್ ಸ್ವಭಾವದಿಂದಲೇ ಹೆಚ್ಚು ಪ್ರಸಿದ್ಧಿಯಾಗಿದ್ದಾಳೆ. ದಿಟ್ಟತನ ಎನ್ನುವುದು ಆಕೆಗೆ ರಕ್ತದಲ್ಲೇ ಬಂದಿದೆಯಂತೆ. ಅವಳ ತಂದೆ ಬಿಹಾರದ ಪ್ರಭಾವಿ ರಾಜಕಾರಣಿ. ತಂದೆಯ ನಾಯಕತ್ವ ಗುಣ ತನ್ನಲ್ಲಿರುವುದರಿಂದ ತಾನು ಹೀಗಿದ್ದೇನೆ ಎನ್ನುವುದು ಐಶಾ ನೀಡುವ ವಿವರಣೆ. ಚಿತ್ರರಂಗಕ್ಕೆ ಬರುವ ಮುಂಚೆ ಐಶಾ ಕೆಲ ಸಮಯ ಮಾಡೆಲ್ ಆಗಿದ್ದಳು. ಒಂದು ಐಟಮ್ ಹಾಡಿಗೆ ಕುಣಿದಿರುವುದು ಬಿಟ್ಟರೆ ಉಳಿದಂತೆ ಐಶಾಳ ಸಿನೆಮಾ ಜ್ಞಾನ ಏನೇನೂ ಇಲ್ಲ. ಆದರೂ ಸತ್ಯಮೇವ ಜಯತೇಗೆ ನಾಯಕಿಯಾಗುವ ಅದೃಷ್ಟ ಪಡೆದಿದ್ದಾಳೆ. ಇದಕ್ಕೆ ಕಾರಣ ತನ್ನ ಬೋಲ್ಡ್ ಸ್ವಭಾವ ಎನ್ನುವುದು ಐಶಾಳ ನಂಬಿಕೆ. ಚಿತ್ರದ ಪಾತ್ರವೂ ತನ್ನಂತೆ ಸಮಾಜಕ್ಕೆ ಮಿಡಿಯುವ, ಸಮಸ್ಯೆಗಳನ್ನು ದಿಟ್ಟವಾಗಿ ಬಗೆಹರಿಸುವ ಹುಡುಗಿಯದ್ದು. ಹೀಗೆ ನನ್ನ ಸ್ವಭಾವಕ್ಕೆ ಪಾತ್ರ ಹೊಂದಿಕೆಯಾಗುತ್ತದೆ ಎನ್ನುವ ಕಾರಣಕ್ಕೆ ಅವಳು ಈ ಚಿತ್ರವನ್ನು ಒಪ್ಪಿಕೊಂಡಿದ್ದಾಳಂತೆ. ಅಕ್ಕ ನೇಹಾ ಶರ್ಮ ಇನ್ನೂ ಆರಕ್ಕೇರದೆ ಮೂರಕ್ಕಿಳಿಯದೆ ಅತಂತ್ರ ಸ್ಥಿತಿಯಲ್ಲಿದ್ದಾಳೆ. ತಂಗಿಗೂ ಅದೇ ಸ್ಥಿತಿ ಬಾರದಿರಲಿ ಎನ್ನುವುದಷ್ಟೆ ಹಾರೈಕೆ. Advertisement
ಐಶಾರೇ ಐಶಾ
06:00 AM Jul 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.