Advertisement

ಎಂ ಎಸ್ ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

03:57 PM Jun 14, 2020 | keerthan |

ಮುಂಬೈ: ಬಾಲಿವುಡ್ ನ ಪ್ರತಿಭಾನ್ವಿತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಮುಂಬೈ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

34 ವರ್ಷದ ಸುಶಾಂತ್ ಸಿಂಗ್ ಅವರು ತನ್ನ ಮುಂಬೈ ನಿವಾಸದಲ್ಲಿ ವಾಸವಾಗಿದ್ದರು. ಲಾಕ್ ಡೌನ್ ಸಮಯದಲ್ಲಿ ಇಲ್ಲಿ ಒಬ್ಬಂಟಿಯಾಗಿದ್ದರು ಎನ್ನಲಾಗಿದೆ.

ಸುಶಾಂತ್ ಸಿಂಗ್  ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾಂದ್ರಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

1986 ಜನವರಿ 21ರಂದು ಬಿಹಾರ್ ರಾಜ್ಯದ ಪಾಟ್ನಾ ದಲ್ಲಿ ಸುಶಾಂತ್ ಜನಿಸಿದ್ದರು. ಕಿರುತೆರೆಯಲ್ಲಿ ನಟನಾ ವೃತ್ತಿ ಆರಂಭಿಸಿದ್ದ ಸುಶಾಂತ್ ಸಿಂಗ್ ರಜಪೂತ್, ಕಿಸ್ ದೇಶ್ ಮೆ ಹೇ ಮೇರಾ ದಿಲ್, ಪವಿತ್ರ ರಿಶ್ತಾ ಧಾರವಾಹಿಗಳಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದಿದ್ದರು.

ಇದನ್ನೂ ಓದಿ: ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲ್ಯನ್

Advertisement

2013ರಲ್ಲಿ ಕಾಯ್ ಪೋ ಚೆ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಸುಶಾಂತ್ ಸಿಂಗ್ ಕಾಲಿಟ್ಟರು. ಈ ಚಿತ್ರದ ಅದ್ಭುತ ನಟನೆಗಾಗಿ ಸುಶಾಂತ್ ಫಿಲ್ಮಫೇರ್ ಪ್ರಶಸ್ತಿಗೂ ನಾಮಿನೇಟ್ ಆಗಿದ್ದರು. ನಂತರ ಬಂದ ಶುದ್ಧ ದೇಸಿ ರೊಮ್ಯಾನ್ಸ್, ಡಿಟಿಕ್ಟಿವ್ ಬ್ಯೋಂಕೇಶ್ ಬಕ್ಷಿ ಚಿತ್ರದಲ್ಲಿ ನಟಿಸಿದ್ದರು. 2014ರ ದೊಡ್ಡ ಹಿಟ್ ಚಿತ್ರ ಪಿಕೆ’’ ಯಲ್ಲಿ ಸರ್ಫರಾಜ್ ಆಗಿ ಕಾಣಿಸಿಕೊಂಡಿದ್ದ ಸುಶಾಂತ್ ಗೆ ನಂತರ ದೊಡ್ಡ ಗೆಲುವು ತಂದು ಕೊಟ್ಟಿದ್ದು ಕ್ರಿಕೆಟಿಗ ಮಹೇಂದ್ರ ಸಿಂಗ್ ಜೀವನಾಧಾರಿತ ಚಿತ್ರ ‘ಎಂ ಎಸ್ ಧೋನಿ, ದಿ ಅನ್ ಟೋಲ್ಡ್ ಸ್ಟೋರಿ’ಚಿತ್ರ.

ನಂತರ ಕೇದಾರನಾಥ್ ಮತ್ತು 2019ರಲ್ಲಿ ತೆರೆಕಂಡ ಚಿಚೋರೆ ಚಿತ್ರಗಳಲ್ಲಿ ಸುಶಾಂತ್ ನಟಿಸಿದ್ದರು. ಪ್ರತಿಭಾನ್ವಿತ ನಟನಾಗಿದ್ದ ಸುಶಾಂತ್ ಮುಂದೆ ದೊಡ್ಡ ಸ್ಟಾರ್ ಆಗುವ ಭರವಸೆ ಮೂಡಿಸಿದ್ದರು. ಆದರೆ ಅದರ ಮೊದಲೇ ಇಹಲೋಕ ತ್ಯಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next