Advertisement

ಉಪ್ಪಿಯ ‘ಕಬ್ಜ’ ಕಣಕ್ಕೆ ಬಾಲಿವುಡ್ ನಟ ಎಂಟ್ರಿ…!

01:56 PM Feb 27, 2021 | Team Udayavani |

ಬೆಂಗಳೂರು: ನಿರ್ದೇಶಕ ಹಾಗೂ ನಿರ್ಮಾಪಕ ಆರ್.ಚಂದ್ರು ‘ಕಬ್ಜ’ ಸಿನಿಮಾ ಕೈಗೆತ್ತಿಕೊಂಡಿರುವುದು ನಿಮಗೆಲ್ಲ ಗೊತ್ತು. ಈಗಾಗಲೇ ಚಿತ್ರೀಕರಣ ಶುರು ಮಾಡಿರುವ ಚಿತ್ರತಂಡಕ್ಕೆ ಇದೀಗ ಬಾಲಿವುಡ್ ನಟನೊರ್ವನ ಎಂಟ್ರಿ ಆಗಿದೆ.

Advertisement

ಹೌದು, ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕಬ್ಜ ಚಿತ್ರಕ್ಕೆ ಚಂದನವನದ ‘ಬುದ್ಧಿವಂತ’ ಉಪೇಂದ್ರ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಅದ್ಧೂರಿ ಬಜೆಟ್ ನ ಈ ಚಿತ್ರಕ್ಕೆ ನಿರ್ದೇಶಕ ಚಂದ್ರು ಅವರು ಸುದೀಪ್ ಅವರನ್ನೂ ಕರೆತಂದಿದ್ದಾರೆ. ‘ಮುಕುಂದ ಮುರಾರಿ’ ಸಿನಿಮಾ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕನ್ನಡದ ಬಾದ್ ಷಾ ಸುದೀಪ್ ಈ ಸಿನಿಮಾದಲ್ಲಿ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಬಿಗ್ ಸ್ಟಾರ್ ಗಳಿಂದ ಹೈಪ್ ಕ್ರಿಯೇಟ್ ಮಾಡಿರುವ ‘ಕಬ್ಜ’ದಲ್ಲಿ ಬಾಲಿವುಡ್ ನಟ ದಾನಿಶ್ ಅಖ್ತರ್ ಕೂಡ ಅಭಿನಯಿಸಲಿದ್ದಾರೆ. ಈ ವಿಷಯವನ್ನೇ ದಾನಿಶ್ ಅವರೇ ಖಚಿತಪಡಿಸಿದ್ದಾರೆ.

ದಾನಿಶ್ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವುದು ಇದೆ ಮೊದಲೇನಲ್ಲ. ಅವರು ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದಲ್ಲಿ ಭೀಮನ ಪಾತ್ರಕ್ಕೆ ಜೀವ ತುಂಬಿದ್ದರು. ಉದ್ಘರ್ಷ ದಲ್ಲೂ ನಟಿಸಿದ್ದರು. ಅದರ ಜತೆಗೆ ಕಿಚ್ಚ ಸುದೀಪ್ ಅವರ ‘ಕೋಟಿಗೊಬ್ಬ 3’ ಸಿನಿಮಾದಲ್ಲಿಯೂ ಪಾತ್ರ ನಿಭಾಯಿಸಿದ್ದು,ಈ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ.

ಇನ್ನು ಕಬ್ಜ ಸಿನಿಮಾ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿದೆ. ಈ ಸಿನಿಮಾದಲ್ಲಿ ಉಪೇಂದ್ರ ಹಾಗೂ ಸುದೀಪ್ ಅವರ ಜಬರ್ದಸ್ತ್ ಲುಕ್ ಗಳು ಸಿನಿಪ್ರಿಯರ ಕುತೂಹಲ ಇಮ್ಮಡಿಸಿವೆ. ಲಾಕ್ ಡೌನ್ ನಿಂದ ಬ್ರೇಕ್ ಪಡೆದಿದ್ದ ಚಿತ್ರದ ಶೂಟಿಂಗ್ ಶುಕ್ರವಾರ( ಫೆ.26)ದಿಂದ ಮತ್ತೆ ಶುರುವಾಗಿದೆ. ಆರ್ . ಚಂದ್ರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next