Advertisement

ತೃತೀಯ ಲಿಂಗಿಗಳಿಗೆ ಮನೆ: 1.5 ಕೋಟಿ ಕೊಟ್ಟ ಬಾಲಿವುಡ್ ನಟ ಅಕ್ಷಯ್‌ ಕುಮಾರ್

09:56 AM Mar 03, 2020 | Hari Prasad |

ಮುಂಬಯಿ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ತೃತೀಯ ಲಿಂಗಿಗಳ ಸುಮುದಾಯಕ್ಕೆ ಮನೆಗಳನ್ನು ನಿರ್ಮಿಸಿಕೊಡಲು 1.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅವರು ಈ ಯೋಜನೆ ಕೈಗೊಂಡಿರುವ ‘ಲಕ್ಷ್ಮಿ ಬಾಂಬ್‌’ ನಿರ್ದೇಶಕ ರಾಘವ್‌ ಲಾರೆನ್ಸ್‌ರ ದತ್ತಿ ಸಂಸ್ಥೆಗೆ ಹಣ ನೀಡಿದ್ದಾರೆ.

Advertisement

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಲಾರೆನ್ಸ್‌, ನಮ್ಮ ದತ್ತಿ ಸಂಸ್ಥೆಗೆ 15 ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ನಾವು ತೃತೀಯ ಲಿಂಗಿ ಸಮುದಾಯಕ್ಕೆ ಮನೆ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ. ಇದಕ್ಕೆ ಅಕ್ಷಯ್‌ 1.5 ಕೋಟಿ ರೂ. ನೀಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next