Advertisement

ಬೋಲ್ಡ್ ರಾಜಾ

11:07 PM May 09, 2019 | mahesh |

‘ಮೈ ನೇಮ್‌ ಈಸ್‌ ರಾಜ್‌, ವಾಟ್ ಇಸ್‌ ಯುವರ್‌ ನೇಮ್‌ ಪ್ಲೀಸ್‌…’

Advertisement

– ಇದು ಡಾ.ರಾಜಕುಮಾರ್‌ ಅಭಿನಯದ ‘ಹಾವಿನ ಹೆಡೆ’ ಚಿತ್ರದ ಹಾಡು. ಡಾ.ರಾಜಕುಮಾರ್‌ ಹಾಡಿರುವ ಈ ಸೂಪರ್‌ ಹಿಟ್ ಸಾಂಗ್‌ ಇಂದಿಗೂ ಎವರ್‌ಗ್ರೀನ್‌. ಎಲ್ಲಾ ಸರಿ, ಹೀಗೇಕೆ ಈ ಹಾಡಿನ ವಿಷಯ ಎಂಬ ಪ್ರಶ್ನೆಗೆ ಉತ್ತರ, ‘ಮೈ ನೇಮ್‌ ಈಸ್‌ ರಾಜಾ’ ಎಂಬ ಹೊಸ ಚಿತ್ರ. ಹೌದು, ‘ಮೈ ನೇಮ್‌ ಈಸ್‌ ರಾಜಾ’ ಚಿತ್ರದ ಮೂಲಕ ಅಶ್ವಿ‌ನ್‌ ನಿರ್ದೇಶಕರಾಗಿದ್ದಾರೆ. ಸದ್ದಿಲ್ಲದೆಯೇ ಶೇ.75 ರಷ್ಟು ಚಿತ್ರೀಕರಣವೂ ನಡೆದಿದೆ. ರಾಜ್‌ ಸೂರ್ಯನ್‌ ಚಿತ್ರದ ಹೀರೋ. ಈ ಹಿಂದೆ ರಾಜ್‌ ಸೂರ್ಯನ್‌, ‘ಸಂಚಾರಿ’,’ಜಟಾಯು’ ಚಿತ್ರದಲ್ಲಿ ನಟಿಸಿದ್ದರು. ತುಂಬಾ ಗ್ಯಾಪ್‌ ಬಳಿಕ ತಮ್ಮ ಹೋಮ್‌ ಬ್ಯಾನರ್‌ನಲ್ಲೇ ‘ಮೈ ನೇಮ್‌ ಈಸ್‌ ರಾಜಾ’ ಚಿತ್ರ ಮಾಡಿದ್ದಾರೆ. ಇನ್ನು, ಅವರ ಸಹೋದರ ಪ್ರಭುಸೂರ್ಯ (ಪ್ರಭಾಕರ್‌) ಈ ಚಿತ್ರದ ನಿರ್ಮಾಪಕರು. ಇತ್ತೀಚೆಗೆ ಚಿತ್ರದ ಟೀಸರ್‌ ಹಾಗೂ ಶೀರ್ಷಿಕೆ ಅನಾವರಣಗೊಳಿಸಿದ ಚಿತ್ರತಂಡ, ಸಿನಿಮಾ ಕುರಿತು ಹೇಳಿಕೊಂಡಿತು.

ಮೊದಲು ಮಾತು ಶುರುಮಾಡಿದ್ದು, ನಿರ್ದೇಶಕ ಅಶ್ವಿ‌ನ್‌. ‘ಇದು ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ. ತೆಲುಗಿನಲ್ಲಿ ‘ನಾ ಪೇರು ರಾಜಾ’ ಹೆಸರಲ್ಲಿ ಬಿಡುಗಡೆಯಾಗಲಿದೆ. ಕಳೆದ ಮೂರು ವರ್ಷದಿಂದ ಕಥೆ ರೆಡಿಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಚಿತ್ರಕ್ಕೆ ಬೇಕಾದ್ದೆಲ್ಲವನ್ನೂ ನಿರ್ಮಾಪಕರು ಪೂರೈಸಿದ್ದಾರೆ. ಇದೊಂದು ಮಾಸ್‌ ಸಿನಿಮಾ. ಕ್ಲಾಸ್‌ ಪ್ರಿಯರಿಗೂ ಇಷ್ಟವಾಗುವ ಅಂಶಗಳಿವೆ. ಒಂದು ಹೆಣ್ಣಿಗೆ ಸಮಸ್ಯೆಯಾದಾಗ, ನಾಯಕ ಅವಳ ಬೆನ್ನ ಹಿಂದೆ ನಿಂತು ಹೇಗೆಲ್ಲಾ ಆ ಸಮಸ್ಯೆ ಎದುರಿಸುತ್ತಾನೆ, ತಾನೂ ಆ ಸಮಸ್ಯೆಗೆ ಸಿಲುಕಿದಾಗ ಅದರಿಂದ ಹೇಗೆ ಹೊರಬರುತ್ತಾನೆ ಎಂಬುದು ಕಥೆ. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ನಾಯಕ ರಿಸ್ಕ್ನಲ್ಲೇ ಸ್ಟಂಟ್ಸ್‌ ಮಾಡಿದ್ದಾರೆ. ನಿರ್ಮಾಪಕರು ಇದು ಬೇಕು ಅಂದರೆ, ಇಷ್ಟು ಸಾಕಾ ಅನ್ನುತ್ತಿದ್ದರು. ಅಷ್ಟರಮಟ್ಟಿಗೆ ಅದ್ಧೂರಿಯಾಗಿ ಸಿನಿಮಾ ಮಾಡಿದ್ದಾರೆ. ಇಲ್ಲಿ ಎಲ್ಲರೂ ಹಂಡ್ರೆಡ್‌ ಪರ್ಸೆಂಟ್ ಎಫ‌ರ್ಟ್‌ ಹಾಕಿ ಕೆಲಸ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರವೂ ಮುಖ್ಯವಾಗಿ ಬೇಕು’ ಅಂದರು ಅಶ್ವಿ‌ನ್‌.

ನಾಯಕ ರಾಜ್‌ ಸೂರ್ಯನ್‌ ಅವರಿಗೆ ಹಿಂದಿನ ಎರಡು ಚಿತ್ರಗಳಿಗಿಂತಲೂ ಇದು ಭಿನ್ನವಾದ ಕಥೆ ಹೊಂದಿದೆಯಂತೆ. ‘ನಾನು ಕಥೆಯ ಎಳೆ ಕೇಳಿದಾಗ ಇಷ್ಟವಾಯ್ತು. ನಿರ್ದೇಶಕರು ಎರಡು, ಮೂರು ವರ್ಷಗಳಿಂದ ಆ ಕಥೆ ಮೇಲೆ ವರ್ಕ್‌ ಮಾಡಿ, ಈಗ ಸಿನಿಮಾವನ್ನು ಮುಗಿಸುವ ಹಂತಕ್ಕೆ ತಂದಿದ್ದಾರೆ. ಇದೊಂದು ರೊಮ್ಯಾಂಟಿಕ್‌ ಕಥೆ ಹೊಂದಿರುವ ಚಿತ್ರ. ನನಗೆ ರೊಮ್ಯಾನ್ಸ್‌ ಮಾಡುವುದು ಕಷ್ಟವಾಯಿತು. ಫೈಟ್ಸ್‌, ಡ್ಯಾನ್ಸ್‌ ಮಾಡಿಬಿಡಬಹುದು. ರೊಮ್ಯಾನ್ಸ್‌ ಅಂದರೆ ಕಷ್ಟ. ಆದರೂ ಕೆಲಸ ಮಾಡಿದ್ದೇನೆ. ಇನ್ನು, ಕನ್ನಡದ ಬಹುತೇಕ ನಟಿಯರಿಗೆ ಈ ಪಾತ್ರ ಮಾಡಿ ಅಂದರೆ, ಯಾರೂ ಮಾಡಲಿಲ್ಲ. ಕಾರಣ, ಇಲ್ಲಿ ಲಿಪ್‌ಲಾಕ್‌ ಸೀನ್‌ ಜಾಸ್ತಿ ಇದ್ದವು. ಕೊನೆಗೆ ಮುಂಬೈ ನಟಿಯರ ಮೊರೆ ಹೋಗಬೇಕಾಯಿತು’ ಎಂದು ವಿವರ ಕೊಟ್ಟರು ರಾಜ್‌ ಸೂರ್ಯನ್‌.

ನಿರ್ಮಾಪಕ ಪ್ರಭುಸೂರ್ಯ ಅವರಿಗೆ ಕಥೆ ಇಷ್ಟವಾಗಿದ್ದರಿಂದ ಚರ್ಚೆ ನಡೆಸಿ, ಈ ಚಿತ್ರ ಮಾಡಿದ್ದೇವೆ. ಕೇರಳ, ಮೊನಾಲಿ, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ ಬಜೆಟ್ ಲೆಕ್ಕ ಹಾಕಿಲ್ಲ. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶ ನಮ್ಮದು ಎಂದರು ಅವರು.

Advertisement

ಮುಂಬೈ ಮೂಲದ ನಟಿ ಆಕರ್ಷಕಗೆ ಇದು ಮೊದಲ ಚಿತ್ರ. ಅವರಿಲ್ಲಿ ಬೋಲ್ಡ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಮುಂಬೈನ ಮತ್ತೂಬ್ಬ ಬೆಡಗಿ ನಸ್ರೀನ್‌ ಕೂಡ ಹಾಟ್ ಆಗಿರುವಂತಹ ಪಾತ್ರ ಮಾಡಿದ್ದಾರಂತೆ. ಚಿತ್ರಕ್ಕೆ ವೆಂಕಟ್ ಕ್ಯಾಮೆರಾ ಹಿಡಿದರೆ, ಎಲ್ವಿನ್‌ ಜೋಶ್ವ ಸಂಗೀತ ನೀಡಿದ್ದಾರೆ. ಅವರಿಗೆ ಇದು ಕನ್ನಡದಲ್ಲಿ 10 ನೇ ಸಿನಿಮಾವಂತೆ. ಕವಿರಾಜ್‌, ನಾಗೇಂದ್ರಪ್ರಸಾದ್‌ ನಾಲ್ಕು ಹಾಡುಗಳನ್ನ ಬರೆದಿದ್ದಾರೆ ಎಂಬುದು ಅವರ ಮಾತು. ಚಿತ್ರಕ್ಕೆ ಕಿರಣ್‌ ಕೂಡ ನಿರ್ಮಾಣದಲ್ಲಿ ಸಾಥ್‌ ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next