Advertisement

Yakshagana ಹೊಸ ಮೇಳದಿಂದ ಧರ್ಮ, ಕ್ಷೇತ್ರ ಬೆಳಗಲಿ:ಹರಿನಾರಾಯಣ ಆಸ್ರಣ್ಣ

11:21 PM Dec 10, 2023 | Team Udayavani |

ಮಂಗಳೂರು: ಹಳೇ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ವತಿಯಿಂದ ಹಳೇಕೋಟೆ ಶ್ರೀ ಮಾರಿಯಮ್ಮ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಆರಂಭಿಸಲಾಗಿದ್ದು, ಬೋಳಾರ ಮೇಳದ ಉದ್ಘಾಟನೆ, ಮೇಳದ ಪ್ರಥಮ ದೇವರ ಸೇವಾ ಬಯಲಾಟ ಹಾಗೂ ಸಮ್ಮಾನ ಸಮಾರಂಭ ಶನಿವಾರ ರಾತ್ರಿ ನೆರವೇರಿತು.

Advertisement

ಶತಮಾನದ ಚರಿತ್ರೆ ಹೊಂದಿರುವ ಪ್ರಾಚೀನ ಬೋಳಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕಟೀಲು ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಅವರು, ಯಕ್ಷಗಾನ ಇಂದು ಸೊರಗುತ್ತಿರುವುದು ನಿಜ, ಇಂತಹ ಸಂದರ್ಭದಲ್ಲೂ ಪುರಾತನ ಬೋಳಾರ ಮೇಳವನ್ನು ಈಗ ಮತ್ತೆ ಆರಂಭಿಸಲು ಹೊರಟಿರುವುದಕ್ಕೆ ಅಭಿನಂದನೆಗಳು, ಈ ಮೇಳದ ಮೂಲಕ ಧರ್ಮ, ಭಕ್ತಿಯ ಪ್ರಸಾರವಾಗಲಿ, ಜತೆಗೆ ಕ್ಷೇತ್ರವೂ ಮತ್ತಷ್ಟು ಬೆಳಗಲಿ ಎಂದು ಹಾರೈಸಿದರು.

ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್‌ ಶೆಟ್ಟಿ ಅವರು ಮಾತನಾಡಿ, ಧರ್ಮದ ಬಗ್ಗೆ ಅರಿವು ಮೂಡಿಸುವುದಕ್ಕೆ ಯಕ್ಷಗಾನ ಅತ್ಯುತ್ತಮ ಮಾಧ್ಯಮ, ಸಮಾಜದ ಮುಂದೆ ರಾಮನಂತಹ ಆದರ್ಶವನ್ನು ಸಶಕ್ತವಾಗಿ ಇರಿಸಬಲ್ಲದಾದರೆ ಅದು ಯಕ್ಷಗಾನದ ಹಿರಿಮೆ ಎಂದರು.

ಊರಿನವರು ಹೊಸ ಮೇಳಕ್ಕೆ ಪ್ರೋತ್ಸಾಹ ಕೊಡಬೇಕು, ಮೇಳದ ವರೂ ಪೌರಾಣಿಕ ಪ್ರಸಂಗಗಳ ಜತೆಗೆ ಉತ್ತಮ ಸಂದೇಶವಿರುವ ಸಾಮಾಜಿಕ ಪ್ರಸಂಗಗಳನ್ನೂ ಪ್ರದರ್ಶಿಸಬೇಕು. ಮೇಳದವರೂ ಗುಣಮಟ್ಟ ಕಾಯ್ದುಕೊಂಡು, ಶಿಸ್ತು, ನಿಯಮಗಳನ್ನು ಕಾಯ್ದುಕೊಂಡು ಮುನ್ನಡೆಸುವುದು ಅತ್ಯಗತ್ಯ ಎಂದು ಹೇಳಿದರು.

ಶ್ರೀ ಕ್ಷೇತ್ರ ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ ಉದ್ಯಾವರ ಅವರು ಮಾತನಾಡಿ, ತಟಸ್ಥವಾಗಿದ್ದ ಮೇಳ ತಾಯಿ ಮಾರಿಯಮ್ಮನ ಆಶೀರ್ವಾದದಿಂದ ಮತ್ತೆ ಚೈತನ್ಯ ಪಡೆದಿದೆ, ಇದು ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.

Advertisement

ಮಾರಿಯಮ್ಮ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಅಶೋಕ್‌ ಕುಮಾರ್‌ ಅಷ್ಟಮಂಗಲ ಪ್ರಶ್ನೆಯ ಫಲವಾಗಿ ಈ ಮೇಳ ಮತ್ತೆ ಆರಂಭಗೊಂಡಿದ್ದು ಎಲ್ಲರೂ ಹೊಸ ಮೇಳವನ್ನು ಪ್ರೋತ್ಸಾಹಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಸೀತಾರಾಮ ಎ., ಸಾಗರ್‌ ಪ್ರೊಜೆಕ್ಟ್‌ನ ಗಿರಿಧರ ಶೆಟ್ಟಿ, ಮನಪಾ ಸದಸ್ಯರಾದ ಭಾನುಮತಿ, ರೇವತಿ ಉಪಸ್ಥಿತರಿದ್ದರು.

ಹಿರಿಯ ಯಕ್ಷಗಾನ ಕಲಾವಿದರಾದ ಶಿವರಾಮ ಜೋಗಿ ಬಿ.ಸಿ.ರೋಡ್‌ ಹಾಗೂ ಬೋಳಾರ ಸುಬ್ಬಯ್ಯ ಶೆಟ್ಟಿ ಅವರನ್ನು ಮೇಳದ ಪರವಾಗಿ ಸಮ್ಮಾನಿಸಲಾಯಿತು. ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್‌ ಎಸ್‌. ಸ್ವಾಗತಿಸಿ ಸುಭಾಷ್‌ ಕಾಂಚನ್‌ ವಂದಿಸಿದರು. ಮೋಹನ್‌ರಾಜ್‌ ಬೋಳಾರ ನಿರೂಪಿಸಿದರು.

ಈ ವರ್ಷದ ಪ್ರಸಂಗಗಳು
ಶ್ರೀ ಬೋಳಾರ ಕ್ಷೇತ್ರ ಮಹಾತ್ಮೆ, ಛಲದಂಕ ಉತ್ತಂಕ, ಬಂಡಿದೈವ ಪಿಲ್ಚಂಡಿ, ಸಮರಸನಾತನಿ, ಸಿರಿದೇವಿ ಮಾತೆ¾, ಶ್ರೀ ದೇವಿ ಮಹಾತ್ಮೆ, ಮಂತ್ರ ಜಾವದೆ, ಸತ್ಯೊದ ಸ್ವಾಮಿ ಕೊರಗಜ್ಜ, ಶಬರಿಮಲೆ ಅಯ್ಯಪ್ಪ.

Advertisement

Udayavani is now on Telegram. Click here to join our channel and stay updated with the latest news.

Next