Advertisement

ಬೋಳ: ಮುರಿದ ತೂಗು ಸೇತುವೆ ತಾತ್ಕಾಲಿಕ ಮುಕ್ತಿ

12:22 AM Jun 17, 2019 | sudhir |

ಬೆಳ್ಮಣ್‌: ಬೋಳ ಗ್ರಾ.ಪಂ.ನ ವ್ಯಾಪ್ತಿಯ ಬೋಳ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇಗುಲದ ಪಕ್ಕದ ಕಿರು ತೂಗು ಸೇತುವೆಯ ಕಬ್ಬಿಣದ ರಾಡ್‌ ಶುಕ್ರವಾರ ಏಕಾಏಕಿಯಾಗಿ ಮುರಿದು ಬಿದ್ದು ಸುದ್ದಿಯಾಗಿದ್ದ ಹಿನ್ನೆಲೆಯಲ್ಲಿ ಪಂಚಾಯತ್‌ ಅಧ್ಯಕ್ಷ ಸತೀಶ್‌ ಪೂಜಾರಿ ಅವರ ನೇತೃತ್ವದಲ್ಲಿ ಪಂಚಾಯತ್‌ ವತಿಯಿಂದ ರವಿವಾರ ತಾತ್ಕಾಲಿಕ ದುರಸ್ತಿ ನಡೆಸಲಾಗಿದೆ.
ಬೋಳದಗುತ್ತು, ಬೋಳ‌ ಮಾರಗುತ್ತು, ಅಂಬರಾಡಿ, ನಡಿಗುತ್ತು ಭಾಗದ ಜನರಿಗೆ ಬೋಳ ದೇಗುಲಕ್ಕೆ ಆಗಮಿಸಲು ಅನುಕೂಲವಾಗಿರುವ ಈ ಕಿರು ತೂಗು ಸೇತುವೆಯ ಒಂದು ಭಾಗದಲ್ಲಿ ಆಧಾರವಾಗಿದ್ದ ಕಬ್ಬಿಣದ ರಾಡ್‌ ಮುರಿದು ಬಿದ್ದು ಆತಂಕ ಉಂಟಾಗಿತ್ತು. ಈ ಬಗ್ಗೆ ಕೂಡಲೇ ಸ್ಪಂದಿಸಿದ ಬೋಳ ಗ್ರಾ.ಪಂ. ಅಧ್ಯಕ್ಷರು ನಿಯೋಗದ ಜತೆ ಭೇಟಿ ನೀಡಿ ಪಂಚಾಯತ್‌ ವತಿಯಿಂದ ತಾತ್ಕಾಲಿಕ ದುರಸ್ತಿಯ ಭರವಸೆ ನೀಡಿದ್ದರು.

Advertisement

ಕಿರು ಸೇತುವೆ ಪಕ್ಕದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ದೊಡ್ಡ ಸೇತುವೆ ನಿರ್ಮಾಣ ಗೊಳ್ಳಿದ್ದು ಈ ಸàತುವೆ ಮುಗುಳಿ ಕಡೆಯ ಬೋಳ ಗ್ರಾಮಸ್ಥರಿಗೆ ಸಚ್ಚೇರಿಪೇಟೆಗೆ ಬರಲು ಬಲು ಹತ್ತಿರದ ವ್ಯವಸ್ಥೆಯಾಗಲಿದೆ. ರಾಡ್‌ ಮುರಿದ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗಿದ್ದು ನೂತನ ಸೇತುವೆ ನಿರ್ಮಾಣಗೊಳ್ಳುವವರೆಗೆ ಸಹಕರಿಸ ಬೇಕೆಂದು ಸತೀಶ್‌ ಪೂಜಾರಿ ವಿನಂತಿ ಸಿದ್ದಾರೆ. ಈ ಸಂದರ್ಭ ಜಯರಾಮ ಸಾಲ್ಯಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next