Advertisement
ಶ್ರೀಯೋಗನರಸಿಂಹಸ್ವಾಮಿ ಬೆಟ್ಟದ ಸಮೀಪ ಆಶ್ರಯ ಯೋಜನೆಯಲ್ಲಿ ಸಣ್ಣಮ್ಮ ಎಂಬವರಿಗೆ 1991ರಲ್ಲಿ ಪಾಂಡವಪುರ ತಹಶೀಲ್ದಾರ್ ನೀಡಿದ್ದಾರೆನ್ನುವ 46×80 ಅಡಿ ನಿವೇಶನದ ಹಕ್ಕುಪತ್ರ ಇದೀಗ ಹೊರ ಬಂದಿದ್ದು ಭಾರೀ ಸಂಚಲನ ಉಂಟು ಮಾಡಿದೆ. ಆಶ್ರಯ ಯೋಜನೆಗೆ ಅತಿ ಹೆಚ್ಚೆಂದರೂ 30×40 ಅಳತೆ ನಿವೇಶನ ಮಾತ್ರ ನೀಡಲಾಗುತ್ತದೆ. ಆದರೆ ಬೆಟ್ಟದ ಪಕ್ಕದಲ್ಲೇ ನೀಡಿರುವ ಈ ಭಾರಿ ಪ್ರಮಾಣದ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನದ ಹಕ್ಕು ಪತ್ರ ಭಾರೀ ವಿವಾದಕ್ಕೆ ಕಾರಣವಾಗಿದೆ.
Related Articles
Advertisement
ತಹಶೀಲ್ದಾರ್ ಅಕ್ರಮ ಕಟ್ಟಡ ನಿರ್ಮಾಣ ಎಂದು ನೋಟಿಸ್ ನೀಡಿದ್ದೇ ಒಬ್ಬರಿಗಾದರೆ, ಕಟ್ಟಡ ನನಗೆ ಸೇರಿದ್ದು ಎಂದು ನ್ಯಾಯಾಲಯದ ಮೊರೆ ಹೋದವರೆ ಮತ್ತೂಬ್ಬರಾಗಿದ್ದಾರೆ. ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಬಿಂಬಿಸಿದ ತಹಶೀಲ್ದಾರ್ ಗೊಂದಲವಿರುವ ಪ್ರಕರಣದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಕಟ್ಟಡಕ್ಕೆ ಹಾಕಿದ್ದ ಬೀಗದ ಕೀಗಳನ್ನು ಬಸವರಾಜುಗೆ ಹಸ್ತಾಂತರ ಮಾಡಿದ್ದರು. ಇದರಿಂದ ಮನೆ ಗೃಹಪ್ರವೇಶವೂ ನಡೆದು ಹೋಗಿರುವುದು ನಾಗರೀಕರನ್ನು ಮತ್ತಷ್ಟು ಕೆರಳಿಸಿದೆ.
ಹಕ್ಕು ಪತ್ರ, ಗ್ರಾಪಂ ಪರವಾನಗಿಯೂ ಬೋಗಸ್: ಸಣ್ಣಮ್ಮ ಹೈಕೋರ್ಟ್‌ಗೆ ಸಲ್ಲಿಸಿರುವ ಹಕ್ಕುಪತ್ರವೂ ಬೋಗಸ್ ಮತ್ತು ಗ್ರಾಪಂ ಪರವಾನಗಿಯೂ ಬೋಗಸ್ ಎಂದಿರುವ ರೈತಸಂಘದ ಉಪಾಧ್ಯಕ್ಷ ಈಶಮುರಳಿ, ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ಬೆನಕ ಸುಬ್ಬಣ್ಣ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಬೋಗಸ್ ಹಕ್ಕುಪತ್ರದ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾವೂ ನ್ಯಾಯಾಲಯದಲ್ಲಿ ಪ್ರತಿವಾದಿಗಳಾಗುತ್ತೇವೆ ಎಂದಿದ್ದು, ಸಣ್ಣಮ್ಮಗೆ ನೀಡಲಾದ ಹಕ್ಕುಪತ್ರದಲ್ಲಿ ನಿವೇಶನ ಸಂಖ್ಯೆಯೇ ಇಲ್ಲ. ಆಶ್ರಯ ಯೋಜನೆಗೆ ನಿಗದಿಪಡಿಸಿದ ಅಳತೆಗಿಂತಲೂ ಎರಡು ಪಟ್ಟು ಹೆಚ್ಚಿನ ನಿವೇಶನ ಅಳತೆ ದಾಖಲಾಗಿದೆ. ಹಕ್ಕುಪತ್ರದ ನಂತರ ಗ್ರಾಪಂನಲ್ಲಿ ಖಾತೆಯೂ ಆಗಿಲ್ಲ. ಪಂಚಾಯ್ತಿಯಿಂದ ಮನೆ ನಿರ್ಮಿಸಲು ಅನುಮತಿಯೇ ನೀಡಿಲ್ಲ. ದೇವಾಲಯಕ್ಕೆ ಸೇರಿದ ಜಮೀನು ಉಳಿಸಲು ನಾಗರಿಕರೂ ದನಿ ಎತ್ತಬೇಕು ಎಂದಿದ್ದಾರೆ.
ಸಣ್ಣಮ್ಮರ ಹಕ್ಕುಪತ್ರದ ಸಂಬಂಧ ಮೇಲುಕೋಟೆ ಗ್ರಾಪಂನಲ್ಲಿ ಯಾವುದೇ ಖಾತೆ ಆಗಿಲ್ಲ. ಮನೆ ನಿರ್ಮಿಸಲು ಪಂಚಾಯಿತಿ ಪರವಾನಗಿಯನ್ನೂ ನೀಡಿಲ್ಲ. ಹಲವರು ನನ್ನ ಸಹಿಯನ್ನೂ ನಕಲಿ ಮಾಡಿರುವುದು ಗಮನಕ್ಕೆ ಬಂದಿದ್ದು, ನಾನೂ ಠಾಣೆಗೆ ದೂರು ನೀಡುತ್ತೇನೆ. – ರಾಜೇಶ್ವರ್, ಪಿಡಿಒ, ಗ್ರಾಪಂ ಮೇಲುಕೋಟೆ