Advertisement

ಯುದ್ಧ ಬಳಕೆಗೆ ಡ್ರೋನ್‌ ಸೃಷ್ಟಿ

03:04 PM Dec 31, 2017 | Team Udayavani |

ವಾಷಿಂಗ್ಟನ್‌: ಪುಟ್ಟ ಪುಟ್ಟ ಡ್ರೋನ್‌ಗಳನ್ನು ಸೇನಾ ಕಾರ್ಯಾಚರಣೆಗಳಿಗೆ ಬಳಸುತ್ತಿರು ವುದು ಹೊಸ ವಿಚಾರವೇನಲ್ಲ. ಆದರೆ, ಇತ್ತೀಚೆಗೆ, ದೈತ್ಯಾಕಾರದ ಡ್ರೋನ್‌ಗಳನ್ನು ಸೃಷ್ಟಿಸಿ, ಅವುಗಳನ್ನು ಸಮರ ಸ್ನೇಹಿ ವಾಹನಗಳನ್ನಾಗಿಸುವ ಹೊಸ ತಂತ್ರಜ್ಞಾನದ ಕಡೆಗೆ ವಿಶ್ವದ ಬಲಾಡ್ಯ ರಾಷ್ಟ್ರಗಳು ದೃಷ್ಟಿ ಹರಿಸಿವೆ. 

Advertisement

ಇದರ ಫ‌ಲವಾಗಿ, ಹೆಸರಾಂತ ವಿಮಾನ ತರಬೇತಿ ಸಂಸ್ಥೆ ಬೋಯಿಂಗ್‌, ಯುದ್ಧ ವಿಮಾನಗಳನ್ನು  ಹೊತ್ತೂಯ್ಯುವ ನೌಕಾ ಪಡೆಯ ಹಡಗುಗಳ ಮೇಲೆ ಸ್ವತಂತ್ರವಾಗಿ ನಿಲುಗಡೆಯಾಗಬಹುದಾದ ಹಾಗೂ ನೌಕಾಪಡೆಯ ಹಡಗುಗಳಿಂದ ಇಂಧನವನ್ನು ಹೊತ್ತೂಯ್ದು ಜೆಟ್‌ ಯುದ್ಧ ವಿಮಾನಗಳಿಗೆ ಆಕಾಶ ಮಾರ್ಗ ಮಧ್ಯದಲ್ಲೇ ಪೂರೈಕೆ ಮಾಡುವಂಥ ಅತ್ಯಾಧುನಿಕ ಡ್ರೋನ್‌ “ಎಂಕ್ಯು 25’ಗಳನ್ನು ವಿನ್ಯಾಸಗೊಳಿಸಿದೆ. 

ಯುದ್ಧ ಪರಿಕರಗಳ ವಿಚಾರದಲ್ಲಿ ಕ್ರಾಂತಿಕಾರಿ ವಿನ್ಯಾಸವೆಂದೇ ಹೇಳಬಹುದಾದ ಈ ಡ್ರೋನ್‌ಗಳು, ಸ್ಟಿಂಗ್‌ ರೇ ಜಾತಿಯ ಮೀನಿನಾಕಾರದಲ್ಲಿದ್ದು ಅತ್ಯಾಧುನಿಕ ರೋಬೋ ತಂತ್ರಜ್ಞಾನ ಹೊಂದಿದೆ. 

ಸದ್ಯಕ್ಕಿದು ಪರೀಕ್ಷಾ ಹಂತದಲ್ಲಿದ್ದು ಎಲ್ಲಾ ಪರೀಕ್ಷೆಗಳಲ್ಲಿ ಪಾಸಾದರೆ ವಿಶ್ವಮಟ್ಟದಲ್ಲಿ ಹೊಸ ಟ್ರೆಂಡ್‌ ಹುಟ್ಟುಹಾಕಲಿದೆ. ಅತ್ತ, ಅಮೆರಿಕ ಈಗಾಗಲೇ ಡ್ರೋನ್‌ ಯುದ್ಧ ವಾಹನಗಳ ಮೇಲೆ ಅನೇಕ ಪ್ರಯೋಗಗಳನ್ನು ಆರಂಭಿಸಿದೆ. ಜನರಲ್‌ ಆಟೋಮಿಕ್ಸ್‌, ಲಕಿØàಡ್‌ ಮಾರ್ಟಿನ್‌, 20 20ರ ಮಧ್ಯಭಾಗದಲ್ಲಿ ಸುಮಾರು 76 ಯುದ್ಧ ಸಹಾಯಕ ಡ್ರೋನ್‌ಗಳನ್ನು ತಯಾ ರಿ ಸಲಿವೆ. ಇವು ಇಂಧನ ಪೂರೈಕೆ ಮಾತ್ರವಲ್ಲದೆ ಅಗತ್ಯ ಬಿದ್ದಲ್ಲಿ ಶತ್ರುಗಳ ಮೇಲೆ ಕ್ಷಿಪಣಿ ದಾಳಿಯನ್ನೂ ನಡೆಸುವಂಥ ತಂತ್ರಜ್ಞಾನ ಹೊಂದಿರಲಿವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next