ಅಸ್ಸಾಂ: ಶಿರಚ್ಛೇದಗೊಂಡ 12 ವರ್ಷದ ವಿದ್ಯಾರ್ಥಿಯೊಬ್ಬನ ಶವ ಅಸ್ಸಾಂನ ಕಾಚಾರ್ ಜಿಲ್ಲೆಯಲ್ಲಿ ಮದರಸಾವೊಂದರಲ್ಲಿ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ಎಎನ್ ಐ ವರದಿ ತಿಳಿಸಿದೆ.
ಇದನ್ನೂ ಓದಿ:Fighter first look: ಸ್ವಾತಂತ್ರ್ಯ ದಿನಕ್ಕೆ ʼಫೈಟರ್ʼ ನಿಂದ ಸ್ಪೆಷೆಲ್ ಟೀಸರ್ ಗಿಫ್ಟ್
ಮೃತ ವಿದ್ಯಾರ್ಥಿಯನ್ನು ರಾಜಿಬುಲ್ ಹುಸೈನ್ ಎಂದು ಗುರುತಿಸಲಾಗಿದೆ. ಕಾಚಾರ್ ಜಿಲ್ಲೆಯ ದಾರೂಸ್ ಸಲಾಂ ಹಫೀಝಿಯಾ ಮದರಸಾದಲ್ಲಿ ಈ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ.
ಮದರಸಾದ ಹಾಸ್ಟೆಲ್ ಕೋಣೆಯಲ್ಲಿ ಶಿರಚ್ಛೇದಗೊಂಡ ವಿದ್ಯಾರ್ಥಿಯ ಶವವನ್ನು ಆತನ ರೂಮ್ ಮೇಟ್ ಗಳು ಗಮನಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿಯ ರೂಮ್ ಮೇಟ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ದಾರೂಸ್ ಸಲಾಂ ಮದರಸಾದ ಇಮಾಮ್ ನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿ ಹುಸೈನ್ ಯಾವುದೇ ಮಾಹಿತಿ ನೀಡದೇ ಮದರಸಾದ ಹಾಸ್ಟೆಲ್ ನಿಂದ ಹೊರ ಹೋಗುತ್ತಿರುವ ವಿಚಾರದಲ್ಲಿ ಇಮಾಮ್ ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಹುಸೈನ್ ಮೂರು ತಿಂಗಳ ಹಿಂದಷ್ಟೇ ಮದರಸಾಕ್ಕೆ ಸೇರಿದ್ದ ಎಂದು ವರದಿ ತಿಳಿಸಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಲ್ಚಾರ್ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಪೋಸ್ಟ್ ಮಾರ್ಟ್ ಮ್ ವರದಿ ಬಂದ ನಂತರ ತನಿಖೆ ನಡೆಸಿ ಕೊಲೆಗೆ ಕಾರಣ ಪತ್ತೆಹಚ್ಚಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.