Advertisement

“ದೇಹದ ಆರೋಗ್ಯಕ್ಕೆ ವ್ಯಾಯಾಮ ಅಗತ್ಯ’

02:20 AM Jul 11, 2017 | Team Udayavani |

ಸುಳ್ಯಪದವು: ದೇಹದ ಮಾನಸಿಕ, ದೈಹಿಕ ಆರೋಗ್ಯ ಸ್ಥಿರತಗೆ ವ್ಯಾಯಾಮ ಅಗತ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯ ಅಶೋಕ್‌ ಕುಮಾರ್‌ ರೈ ಅವರು ಹೇಳಿದರು.

Advertisement

ಅವರು ಸರ್ವೋದಯ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ  ಸರ್ವೋದಯ ಪ್ರೌಢಶಾಲಾ ವಠಾರದಲ್ಲಿ ನಡೆದ ವ್ಯಾಯಾಮ ಶಾಲಾ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಕಡುಬಡವರ ಕಷ್ಟಗಳಿಗೆ ಸ್ಪಂದನೆ ನೀಡುವುದು ನಿಜವಾದ ಜೀವನ. ಯಾರ ಬಳಿಯು ದಾನ, ದೇಣಿಗೆ ಕೇಳದೆ ಆದಾಯದ ಸ್ವಲ್ಪ ಪಾಲು ಸಮಾ ಜಕ್ಕೆ ನೀಡುತ್ತಿದ್ದೇನೆ. ಸಂಘಟನೆಗಳು ಸಮಾಜ ವಾಹಿನಿಯಲ್ಲಿ ಸೇರಿಕೊಂಡಾಗ ಸಮಾಜಮುಖೀ ಚಟುವಟಿಕೆಗಳ ಮೂಲಕ ಆರೋಗ್ಯ ಪೂರ್ಣ ಸಮಾಜ  ನಿರ್ಮಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ವ್ಯಾಯಾಮ ಶಾಲೆಯ ಗೌರವಾಧ್ಯಕ್ಷರಾದ ಎಚ್‌.ಡಿ. ಶಿವರಾಮ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್‌ ಸದಸ್ಯ ರಾಧಾಕೃಷ್ಣ ಬೋರ್ಕರ್‌, ನಿವೃತ್ತ ದೈಹಿಕ ಶಿಕ್ಷಕ ಗೋಪಾಲಕೃಷ್ಣ ಎಸ್‌., ಕಾವು ಶ್ರೀ ಪಂಚಲಿಂಗೇಶ್ವರ ವ್ಯಾಯಾಮ ಶಾಲೆಯ ಕೃಷ್ಣಪ್ಪ ಗೌಡ, ಸರ್ವೋದಯ ಪ್ರೌಢಶಾಲೆಯ ಮುಖ್ಯಗುರು ಅನಂತಗಣಪತಿ ಉಪಸ್ಥಿತರಿದ್ದರು.

ಪುರೋಹಿತ ಸದಾಶಿವ ಭಟ್‌ ಪೈರುಪುಣಿ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದರು.ವಿದ್ಯಾಸಂಸ್ಥೆಯ ಸಂಚಾಲಕ ಮಹಾದೇವ ಭಟ್‌ ಅವರು ಸ್ವಾಗತಿಸಿದರು. ನಿರ್ದೇಶಕ ವೆಂಕಟೇಶ್‌ ಭಟ್‌ ಕಜೆಮೂಲೆ ಅವರು ವಂದಿಸಿದರು.  ಸರ್ವೋದಯ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಖೇಶ್‌ ರೈ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next