Advertisement

ದೇಹ ನಶ್ವರ; ದೇವರು ಶಾಶ್ವತ: ಕನ್ಯಾಡಿ ಶ್ರೀ

02:43 PM May 31, 2017 | |

ಬಂಟ್ವಾಳ: ದೇಹ ನಶ್ವರ; ದೇವರು ಶಾಶ್ವತ. ಮಾನವ ದೇಹ ಕೆಲವು ವರ್ಷ, ದೇವಾಲಯ ಹಲವು ವರ್ಷ ಇರುತ್ತದೆ. ಭೂಮಿಯಲ್ಲಿ ನಮ್ಮದು ಎಂಬುದು ಕೇವಲ ಭ್ರಮೆ. ಕಣ್ಣಿಗೆ ಕಾಣುವ ಎಲ್ಲವೂ ಯಾವುದೇ ಕ್ಷಣದಲ್ಲಿ ಇಲ್ಲವಾಗಬಹುದು. ದೇವರ ಇಚ್ಛೆಯಂತೆ ಎಲ್ಲವೂ ನಡೆಯುತ್ತವೆ ಎಂದು ಧರ್ಮಸ್ಥಳದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Advertisement

ಅವರು ಪಾಣೆಮಂಗಳೂರು ನರಿಕೊಂಬು ನೂತನ ಶಿಲಾಮಯ ಶ್ರೀ ಭಯಂಕೇಶ್ವರ ದೇವಸ್ಥಾನದ ಬ್ರಹ್ಮಕಲಶದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ನಾವು ಇಂದ್ರಿಯ ನಿಗ್ರಹದ ಮೂಲಕ ಭಗವಂತನ ಅರಿವು ಪಡೆಯಬಹುದು. ಕುಂಡಲಿನಿ ಶಕ್ತಿ ಪಡೆ ಯುವ ಮೂಲಕ ಅತೀಂದ್ರಿಯ ಜ್ಞಾನ ಪಡೆಯಬಹುದು. ಅದಕ್ಕೆ ಬೇಕಾಗಿರುವುದು ನನ್ನಿಂದ ಏನಿಲ್ಲ ನಿನ್ನಿಂದಲೇ ಎಲ್ಲ ಪ್ರೇರಣೆ ಎಂಬ ಭಾವನೆ ಮಾತ್ರ ಎಂದು ಅವರು ಹೇಳಿದರು.

ಭಗವಂತನ ಇಚ್ಛೆ
ಸಚಿವ ಬಿ. ರಮಾನಾಥ ರೈ ಮಾತ ನಾಡಿ, ಭಗವಂತ ನಮಗೆಲ್ಲ ಪ್ರೀತಿಸುವ ಮನಸ್ಸು ಕೊಡುವಂತಾಗಲಿ ಎಂದರು. ನಾನು ಜನಪ್ರತಿನಿಧಿಯಾಗಿ ಇಲ್ಲಿನ ತಡೆಗೋಡೆ ನಿರ್ಮಿಸಲು 50 ಲಕ್ಷ ರೂ. ಅನುದಾನ ಒದಗಿಸಿಸದ್ದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತ ನಾಡಿ, ದೇವಾಲಯ ಭಗವಂತನ ಅರಿವು ಉಂಟು ಮಾಡುವ ಕ್ಷೇತ್ರ. ನಾವು ಭಕ್ತಿಯ ಅನುಭೂತಿ ಪಡೆದಾಗ ಎಲ್ಲ ಅಪೇಕ್ಷೆಗಳಿಂದ ಮುಕ್ತರಾಗುತ್ತೇವೆ ಎಂದರು.

Advertisement

ಸಂಘಟಕರ ಸಾಧನೆ
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ, ತಾನು ವಿಟ್ಲಶಾಸಕನಾಗಿದ್ದಾಗ ದೇಗುಲದ ಜಮೀನಿಗೆ ಸರಕಾರದಿಂದ 20 ಲಕ್ಷ ರೂ. ತಡೆಗೋಡೆ ಅನುದಾನ ನೀಡಿದ್ದೆ. ಸುದೀರ್ಘ‌ ಸಮಯದಿಂದ ದೇವಸ್ಥಾನದ ಕೆಲಸ ನಡೆದು ಇಂದು ಬ್ರಹ್ಮಕಲ ಶೋತ್ಸವ ಮಟ್ಟಕ್ಕೆ ಬಂದಿರುವುದು ಸಂಘಟಕರ ಸಾಧನೆಯಿಂದ ಎಂದರು.

ಸಮ್ಮಾನ
ವಾಸ್ತುಶಿಲ್ಪಿ ಪ್ರಸಾದ್‌ ಮುನಿಯಂಗಳ, ದಾರುಶಿಲ್ಪಿ ನಾರಾಯಣ ಆಚಾರ್ಯ ಕಲ್ಲಮುಂಡ್ಕೂರು ಅವರನ್ನು ಸಮ್ಮಾ ನಿಸಲಾಯಿತು.
ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್‌ ಶುಭ ಹಾರೈಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಗಣಪತಿ ಸೋಮಯಾಜಿ, ಕೋಟ ಗುರುನರಸಿಂಹ ದೇವಸ್ಥಾನದ ಧರ್ಮದರ್ಶಿ ಯಜ್ಞನಾರಾಯಣ ಹೇರಳೆ ಉಪಸ್ಥಿತ ರಿದ್ದರು.ರಘುನಾಥ ಸೋಮಯಾಜಿ ಸ್ವಾಗತಿಸಿ, ವೇ| ಮೂ| ಪಿ. ಕೃಷ್ಣರಾಜ ಭಟ್‌ ವಂದಿಸಿದರು. ಶಿಕ್ಷಕ ಬಿ. ರಾಮಚಂದ್ರ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.