Advertisement

ಪ್ರವಾಸೋದ್ಯಮಕ್ಕೆ ಬೋಟಿಂಗ್‌ ಬೂಸ್ಟ್‌

04:07 PM Nov 15, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಪ್ರಮುಖವಾಗಿ ರಾಜ್ಯದ ಅತೀ ದೊಡ್ಡ ಬೋನಾಳ ಪಕ್ಷಿಧಾಮ, ನಜರಾಪುರ ಫಾಲ್ಸ್‌, ಗವಿ ಸಿದ್ಧಲಿಂಗೇಶ್ವರ ದೇವಸ್ಥಾನ, ಹತ್ತಿಕುಣಿ ಜಲಾಶಯ, ಬುದ್ಧ ಮಲಗಿದ ಬೆಟ್ಟ, ಯಾದಗಿರಿ ಕೋಟೆ ಹೀಗೆ ಹಲವಾರು ಪ್ರವಾಸಿ ತಾಣಗಳಿದ್ದರೂ ಜಿಲ್ಲಾ ಕೇಂದ್ರದ ಲುಂಬಿನ ವನದಿಂದ ಮಾತ್ರ ಅಲ್ಪಸ್ವಲ್ಪ ಆದಾಯ ಹೊರತುಪಡಿಸಿ ಇತರೆ ಕಡೆಯಿಂದ ಯಾವುದೇ ಆದಾಯವೇ ಇಲ್ಲ.

Advertisement

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದು ಇದನ್ನು ಅಭಿವೃದ್ಧಿಪಡಿಸಿ ಆದಾಯ ಪಡೆಯಬಹುದು. ಆದರೆ ಅದೇಕೋಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಂತ ನೀರಿನಂತಾಗಿದೆ.ಪ್ರಸ್ತುತ ಲಾಕ್‌ಡೌನ್‌ ಸರಳೀಕರಣಗೊಂಡಿದ್ದು ನಿತ್ಯ 100-150 ಜನರು ಲುಂಬಿನ ಉದ್ಯಾನವನಕ್ಕೆ ಭೇಟಿ ನೀಡಿ ಕಾಲ ಕಳೆಯುತ್ತಿದ್ದಾರೆ. ಪ್ರವೇಶ ಶುಲ್ಕ 5 ರೂ. ನಿಗದಿಪಡಿಸಲಾಗಿದ್ದು, ತಿಂಗಳಿಗೆ 10ರಿಂದ 15 ಸಾವಿರ ಆದಾಯ ತಂದುಕೊಡುತ್ತಿದೆ. ಕೋವಿಡ್‌ ಹಿನ್ನೆಲೆ ಪ್ರವೇಶ ದ್ವಾರದಲ್ಲಿಯೇ ಮಾಸ್ಕ್ ಧರಿಸಿದ್ದನ್ನು ಖಾತ್ರಿಪಡಿಸಿ ಜತೆಗೆ ಸ್ಯಾನಿಟೈಸರ್‌ನಿಂದ ಕೈ ಶುಚಿಗೊಳಿಸಿದ ಬಳಿಕವಷ್ಟೇ ಒಳಗೆ ಪ್ರವೇಶ ನೀಡಲಾಗುತ್ತಿದೆ.

ವನದಲ್ಲಿ ಸುಂದರ ಕೆರೆ ಇದ್ದು, ಬೋಟಿಂಗ್‌ ಆರಂಭಿಸಿ ಲಾಭ ಪಡೆಯಲು ಇಲಾಖೆಗೆ ವಿಫುಲ ಅವಕಾಶವಿದೆ. ಈಗಾಗಲೇ ಟೆಂಡರ್‌ ಕರೆಯಲಾಗಿದ್ದು ಕೆಲವೇ ವಾರಗಳಲ್ಲಿ ಬೋಟಿಂಗ್‌ ಆರಂಭಿಸುವ ಪ್ರಯತ್ನ ನಡೆದಿದೆ. ಬೋಟಿಂಗ್‌ ಆರಂಭದ ಬಳಿಕ ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next