ಮುಂಬಯಿ : ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಡಿ ಕೆ ಜೈನ್ ಮತ್ತು ಇತರ ಕೆಲವು ಹಿರಿಯ ರಾಜ್ಯ ಸರಕಾರಿ ಅಧಿಕಾರಿಗಳಿದ್ದ ಬೋಟ್ ಒಂದು ಮುಂಬಯಿ ಕಿನಾರೆಯಿಂದ ಅರಬ್ಬೀ ದೂರ ಸಮುದ್ರದಲ್ಲಿ ಇಂದು ಬುಧವಾರ ಮುಳುಗಿತೆಂದು ಕೋಸ್ಟ್ ಗಾರ್ಡ್ ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ಎರಡು ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿ ತಿಳಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರಸ್ತಾವಿತ ಸ್ಮಾರಕ ತಾಣಕ್ಕೆ ಅಧಿಕಾರಿಗಳು ಇಂದು ಬೋಟಿನಲ್ಲಿ ಹೋಗುತ್ತಿದ್ದರು. ಸ್ಮಾರಕ ನಿರ್ಮಾಣದ ಕೆಲಸ ಇಂದು ಬುಧವಾರ ಆರಂಭವಾಗುವುದಿತ್ತು.
ಸಮುದ್ರದಲ್ಲಿ ಬೋಟು ಬಂಡೆ ಸಾಲಿಗೆ ಅಪ್ಪಳಿಸಿದ ಕಾರಣ ಅದು ಮುಳುಗಿತು ಎಂದು ಕೋಸ್ಟ್ ಗಾರ್ಡ್ ಹೇಳಿದೆ. ದುರಂತವನ್ನು ಅನುಸರಿಸಿ ಸ್ಮಾರಕ ನಿರ್ಮಾಣ ಕಾರ್ಯವನ್ನು ರದ್ದುಪಡಿಸಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.