Advertisement

ಮೀನುಗಾರಿಕೆ ದೋಣಿ ಮುಳುಗಡೆ: 8 ಮಂದಿ ಮೀನುಗಾರರು ಪಾರು

10:21 AM Dec 11, 2018 | Team Udayavani |

ಮಂಗಳೂರು: ಇಲ್ಲಿನ ಹಳೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್‌ ಬೋಟೊಂದು ಸೋಮವಾರ ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಎಲ್ಲ ಎಂಟು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

Advertisement

“ಮದರ್‌ ಇಂಡಿಯಾ’ ಟ್ರಾಲ್‌ಬೋಟ್‌ ಎಂಟು ಮಂದಿ ಮೀನುಗಾರರ ಸಹಿತ ನಾಲ್ಕು ದಿನಗಳ ಹಿಂದೆ ಹಳೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಸೋಮವಾರ ಬೆಳಗ್ಗೆ ಮಂಗಳೂರಿನಿಂದ ಸುಮಾರು 50- 60 ಕಿ.ಮೀ. ದೂರ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಅಕ್ಕಪಕ್ಕದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಟ್ರಾಲ್‌ ಬೋಟ್‌ಗಳ ಸಹಾಯ ಯಾಚಿಸಿದಾಗ 3- 4 ಬೋಟ್‌ಗಳು ರಕ್ಷಣೆಗೆ ಬಂದಿದ್ದವು. “ಸಹಾರಾ’ ಹೆಸರಿನ ಬೋಟ್‌ನಲ್ಲಿದ್ದವರು ಈ ಬೋಟ್‌ನಲ್ಲಿದ್ದ ಎಲ್ಲ 8 ಮಂದಿಯನ್ನು ರಕ್ಷಿಸಿದರು.

ಬಳಿಕ ಎಂಜಿನ್‌ ಕೆಟ್ಟುಹೋದ “ಮದರ್‌ ಇಂಡಿಯಾ’ ಬೋಟನ್ನು ಎಳೆದು ದಡಕ್ಕೆ ತರಲು ಉಳಿದ ಎಲ್ಲಾ ಬೋಟ್‌ನವರು ಪ್ರಯತ್ನಿಸಿದ್ದರೂ ಪ್ರಯೋಜನವಾಗದೆ ಅದು ಮುಳುಗಡೆಯಾಯಿತು. ಅಪಾಯದಿಂದ ಪಾರಾದ ಮೀನುಗಾರರು ತಮಿಳುನಾಡು ಮೂಲದವರಾಗಿದ್ದು, ಅವರನ್ನು ಸೋಮವಾರ ಸಂಜೆ ಹಳೆ ಬಂದರು ಧಕ್ಕೆಗೆ ಕರೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next