Advertisement
ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು ನಾಪತ್ತೆಯಾಗಿರುವ ಮೀನುಗಾರರನ್ನು ಮಹಾರಾಷ್ಟ್ರದವರು ಹಿಡಿದಿಟ್ಟಿರುವ ಸಾಧ್ಯತೆಯಿದೆ ಎಂಬ ಮಾಹಿತಿಯಿದೆ ಎಂದು ಹೇಳಿದ್ದಾರೆ.
Related Articles
Advertisement
ದೋಣಿಯಲ್ಲಿ ರೇಡಿಯೇಟರ್ ಸಮಸ್ಯೆ ಅಂತ ವಾಪಸ್ ಬಂದು ಮತ್ತೆ ಹೋಗಿದ್ದು ಅಲ್ಲಿಂದ ಸಂಪರ್ಕ ಕಳೆದುಕೊಂಡಿದೆ. 12 ನಾಟಿಕಲ್ ಮೈಲು ಬೋಟ್ ದಾಟಿ ಹೋಗಿದೆ. ಕೇಂದ್ರ ಸರ್ಕಾರದ ಮೇಲೂ ಈ ಕುರಿತು ಹೆಚ್ಚಿನ ಜವಾಬ್ದಾರಿ ಇದೆ. ಕೋಸ್ಟ್ ಕಾರ್ಡ್, ನೌಕಾ ಪಡೆ ನೆರವು ಕೇಳಿದ್ದೇವೆ. ಅವರೂ ಬಂದು ಹೆಲಿಕಾಪ್ಟರ್ ಮೂಲಕ ಶೋಧನೆ ಮಾಡಿದ್ದಾರೆ ಎಂದು ಹೇಳಿದರು.
ಸುಳಿವು ಸಿಕ್ಕಿದೆ ಎನ್ನುವುದು ಸುಳ್ಳು: ಇನ್ನೊಂದೆಡೆ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಎಂ.ಬಿ. ಪಾಟೀಲ್, ನಾಪತ್ತೆಯಾಗಿರುವ ಮೀನುಗಾರರ ಸುಳಿವು ಸಿಕ್ಕಿದೆ ಎನ್ನುವುದು ಸುಳ್ಳು. ಮೀನುಗಾರರ ಹುಡುಕಾಟ ಮುಂದುವರಿದಿದೆ. ಮೀನುಗಾರರನ್ನು ಪತ್ತೆ ಹಚ್ಚಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರ ಹಾಗೂ ಗೋವಾ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ ಎಂದು ಹೇಳಿದರು.
ರಾಜ್ಯ ಮುಖ್ಯ ಕಾರ್ಯದರ್ಶಿಯಿಂದ ಇಸ್ರೋಗೂ ಸಹಕಾರ ಕೋರಿ ಪತ್ರ ಬರೆಸಲಾಗುವುದು. ರಾಜ್ಯ ಸಚಿವ ಸಂಪುಟದಲ್ಲೂ ಆ ಬಗ್ಗೆ ಚರ್ಚೆಯಾಗಿದೆ.ಮೀನುಗಾರರ ಕುಟುಂಬಗಳು ಆತಂಕದಲ್ಲಿವೆ.ಕೇರಳದ ಕೊಚ್ಚಿನಲ್ಲೂ ಹುಡುಕಾಟ ನಡೆದಿದೆ.ಯಾವುದೇ ಕಾರಣಕ್ಕೂ ತಪ್ಪು ಸಂದೇಶ ಕೊಡುವುದು ಬೇಡ ಎಂದು ಮನವಿ ಮಾಡಿದರು.