ರಾಜಸ್ಥಾನ ; ನಲವತ್ತು ಮಂದಿ ಭಕ್ತರಿದ್ದ ದೋಣಿಯೊಂದು ಮುಳುಗಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಈಜಿ ದಡ ಸೇರಿದ್ದು ಮಕ್ಕಳು ಮಹಿಳೆಯರು ಸೇರಿ ಸುಮಾರು ಹನ್ನೆರಡು ಮಂದಿ ನಾಪತ್ತೆಯಾಗಿರುವ ಘಟನೆ ರಾಜಸ್ಥಾನದ ಚಂಬಲ್ ನದಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ರಾಜಸ್ಥಾನದ ಬುಂಡಿ ಜಿಲ್ಲೆಯ ದಿಬ್ರಿಯಲ್ಲಿರುವ ಕಮಲೇಶ್ವರ್ ಮಹಾದೇವ ದೇವಸ್ಥಾನಕ್ಕೆ ತೆರಳಲು ಸುಮಾರು ನಲವತ್ತು ಮಂದಿ ಭಕ್ತರು ಬೆಳಿಗ್ಗೆ ಸುಮಾರು 8.45ರ ಸುಮಾರಿಗೆ ದೋಣಿ ಹತ್ತಿದ್ದಾರೆ ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಪರಿಣಾಮ ದೋಣಿಯಲ್ಲಿ ಸಾಗುತಿದ್ದ ಸಂದರ್ಭ ನದಿಯ ಮಧ್ಯದಲ್ಲಿ ದೋಣಿ ಮುಳುಗಿದೆ ಪರಿಣಾಮ ದೋಣಿಯಲ್ಲಿದವರು ನೀರಿಗೆ ಬಿದ್ದಿದ್ದಾರೆ.
ಘಟನೆಯನ್ನು ಕಂಡ ಇಲ್ಲಿನ ಸ್ಥಳೀಯರು ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ್ದಾರೆ, ಇನ್ನು ಕೆಲವರು ಈಜಿಕೊಂಡು ದಡ ಸೇರಿದ್ದಾರೆ, ಮಕ್ಕಳು ಹಾಗೂ ಮಹಿಳೆಯರು ಸೇರಿ ಸುಮಾರು ಹನ್ನೆರಡು ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೋಟಾ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಶರದ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ:
ಪ್ರೈಮ್ ನಲ್ಲಿ ತೆರೆ ಕಾಣಲಿದೆ ತೆಲುಗಿನ “ನಿಶಬ್ಧಂ”
ಸ್ಥಳದಲ್ಲಿ ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರು ಹಾಗೂ ಎಸ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದ್ದು ಸಾವಿನ ಕುರಿತು ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.