Advertisement
ಮಂಗಳೂರಿನಿಂದ ಸೋಮವಾರ ಬೆಳಗ್ಗೆ ಹೊರಟ ಕ್ವೀನ್ ಮೇರಿ ಹೆಸರಿನ ದೋಣಿಗೆ ಸಮುದ್ರದಲ್ಲಿ ಯಾವುದೋ ವಸ್ತುತಗಲಿ ರಂಧ್ರ ಉಂಟಾಗಿ ನೀರು ಒಳಗೆ ಬರಲಾರಂಭಿಸಿತು.
ಷ್ಟರಲ್ಲಿ ಮುಳುಗಡೆ ಹಂತಕ್ಕೆ ತಲುಪಿತು. ಸ್ಥಳೀಯರಾದ ರವಿ ಮತ್ತು ಅನಿಲ್ ಇನ್ನೊಂದು ದೋಣಿಯ ಮೂಲಕ ಧಾವಿಸಿ
ಅಪಾಯಕ್ಕೆ ಸಿಲುಕಿದ್ದವರನ್ನು ರಕ್ಷಿಸಿ ದಡ ಸೇರಿಸಿದರು. ಸಂಜೆ ವೇಳೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ದೋಣಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ನೀರಿನ ಸೆಳೆತದಿಂದ
ಸಾಧ್ಯವಾಗಿಲ್ಲ. ಎಂಜಿನ್‌ನನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ. ಅಪಾರ ಮೌಲ್ಯದ ಮೀನು ಸಮುದ್ರಪಾಲಾಗಿದೆ.