ಪ್ಯಾರಿಸ್: ಇಂಗ್ಲಿಷ್ ಕಾಲುವೆಯಲ್ಲಿ ಬುಧವಾರ ಹಡಗು ಮುಳುಗಿದ ದುರಂತದಲ್ಲಿ ಕನಿಷ್ಠ 31 ವಲಸಿಗರು ಸಾವನ್ನಪ್ಪಿದ್ದಾರೆ.
ಬ್ರಿಟನ್‌ಗೆ ತೆರಳುತ್ತಿದ್ದ ಹಡಗಿನಲ್ಲಿ 34 ಮಂದಿ ಇದ್ದರು ಎಂದು ನಂಬಲಾಗಿದೆ ಎಂದು ಫ್ರಾನ್ಸ್ ನ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ಅಧಿಕಾರಿಗಳು 31 ಶವಗಳನ್ನು ಹೊರತೆಗೆದಿದ್ದು, ಇಬ್ಬರನ್ನು ರಕ್ಷಿಸಿದ್ದಾರೆ, ಒಬ್ಬ ವ್ಯಕ್ತಿ ಇನ್ನೂ ಕಾಣೆಯಾಗಿದ್ದಾನೆ.
ಮೃತರ ರಾಷ್ಟ್ರೀಯತೆಗಳನ್ನು ಇದುವರೆಗೂ ಬಿಡುಗಡೆ ಮಾಡಲಾಗಿಲ್ಲ.
ಇಂಗ್ಲಿಷ್ ಕಾಲುವೆ ಅಟ್ಲಾಂಟಿಕ್ ಮಹಾಸಾಗರದ ಒಂದು ಭಾಗವಾಗಿದ್ದು, ಇದು ದಕ್ಷಿಣ ಇಂಗ್ಲೆಂಡನ್ನು ಉತ್ತರ ಫ್ರಾನ್ಸ್‌ನಿಂದ ಪ್ರತ್ಯೇಕಿಸುತ್ತದೆ ಮತ್ತು ಉತ್ತರ ಸಮುದ್ರದ ದಕ್ಷಿಣ ಭಾಗಕ್ಕೆ ಅದರ ಈಶಾನ್ಯ ತುದಿಯಲ್ಲಿರುವ ಡೋವರ್ ಜಲಸಂಧಿಯಿಂದ ಸಂಪರ್ಕಿಸುತ್ತದೆ. ಇದು ವಿಶ್ವದ ಅತೀ ಹೆಚ್ಚು ಹಡಗುಗಳು ಪಯಣಿಸುವ ಪ್ರದೇಶವಾಗಿದೆ.