ಬೆಂಗಳೂರು: ಮೋಟಾರು ಬೈಕ್ ಮಾರಾಟ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಟಿವಿಎಸ್ ಮೋಟಾರು ಕಂಪನಿ ಇದೀಗ ಬಿಎಂಡಬ್ಲ್ಯೂ ಮೊಟೊರಾಡ್ ಕಂಪನಿಯೊಂದಿಗೆ ತನ್ನ ದೀರ್ಘಕಾಲದ ಪಾಲುದಾರಿಕೆಯ ಒಪ್ಪಂದವನ್ನು ಮತ್ತೆ ಮುಂದುವರಿಸಿದೆ.
ಭವಿಷ್ಯತ್ತಿನ ತಂತ್ರಜ್ಞಾನ ಮತ್ತು ವಿದ್ಯುತ್ ಚಾಲಿತ ವಾಹನ ಕ್ಷೇತ್ರದಲ್ಲಿ ಸಹಕಾರ ನೀಡುವ ಒಪ್ಪಂದ ಇದಾಗಿದೆ. ಈ ಒಡಂಬಡಿಕೆಯಿಂದಾಗಿ ಟಿವಿಎಸ್ ಕಂಪನಿಯು ಭವಿಷ್ಯತ್ತಿನ ದಿನಗಳಲ್ಲಿ ಬಿಎಂಡಬ್ಲೂé ಮೊಟೊರಾಡ್ ಉತ್ಪನ್ನಗಳ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ ಮತ್ತು ವಿಶ್ವದರ್ಜೆಯ ಗುಣಮಟ್ಟ, ಪೂರೈಕೆ ಸರಪಳಿ ನಿರ್ವಹಣೆ ಮತ್ತು ಕೈಗಾರಿಕೀಕರಣವನ್ನು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಅಂತರ್ಜಲ ಹೆಚ್ಚಳಕ್ಕೆ ಅಕಾಲಿಕ ಮಳೆ ನೆರವು
ಪಾಲುದಾರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿವಿಎಸ್ ಮೋಟಾರು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದ ರ್ಶನ್ ವೇಣು, ಇದು ಒಂಭತ್ತು ವರ್ಷಗಳ ಒಡಂಬಡಿಕೆ ಆಗಿದ್ದು ಮೂಲ ಮೌಲ್ಯಗಳನ್ನು ಯಾವಾಗಲೂ ಪಾಲಿಸಿದ್ದೇವೆ.
ಗುಣ ಮಟ್ಟ, ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ನಾವೀನ್ಯತೆಗಳ ಮೇಲೆಕೇಂದ್ರೀಕರಿಸಿ ಗ್ರಾಹಕರ ತೃಪ್ತಿ ಪಡಿಸುವುದ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ. ಬಿಎಂಡಬ್ಲ್ಯೂಡಿ ನ ಮುಖ್ಯಸ್ಥ ಡಾ.ಮಾರ್ಕಸ್ ಸ್ಯಾಮ್, ಟಿವಿ ಎಸ್ ನೊಂದಿಗೆ ನಮ್ಮ ಸಹಕಾರ ಒಪ್ಪಂದವನ್ನು ವಿಸ್ತರಿಸಲು ಸಂತಸವಾಗುತ್ತದೆ. ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ದಿ ಸಾಧಿಸಲು ಈ ಒಡಂಬಡಿಕೆ ಸಹಕಾರಿಯಾಗಲಿದೆ ಎಂದರು.